ಕಳೆದ ತಾ. 08 ನವೆಂಬರ್ 2024 ರಂದು ಇಂಡಿಯನ್ ಕ್ಲಬ್ ಬಹರೈನ್ ನ ಹೊರಾಂಗಣದಲ್ಲಿ ಜರುಗಿದ ಕನ್ನಡ ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ದೂತವಾಸದ ಭಾರತದ ರಾಯಭಾರಿ ಘನವೆತ್ತ ಶ್ರೀ ವಿನೋದ್ ಕೆ.ಜಾಕೋಬ್, ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆದರಣೀಯ ಅತಿಥಿಗಳಾಗಿ ಮಿಥುನ್ ರೈ, ಡಾ. ಯು.ಟಿ. ಇಫ್ತೀಕರ್ ಫರೀದ್, ಡಾ.ಬಾಲಕೃಷ್ಣ ಶೆಟ್ಟಿ, ಡಾ.ಶಿವಶರಣ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ, ಚಿತ್ರನಟ ನೆನಪಿರಲಿ ಪ್ರೇಮ್, ನಾಯಕಿ ನಟಿ ಅಮೃತಾ ಪ್ರೇಮ್ , ಅಭ್ಯಾಗತರಾಗಿ ಪ್ರವೀಣ್ ಶೆಟ್ಟಿ ವಕ್ವಾಡಿ, ಸೌರಭ್ ಶೆಟ್ಟಿ ಮೊದಲಾದವರು ಪಾಲ್ಗೊಂಡು ಸಮಾರಂಭಕ್ಕೆ ಮೆರುಗನ್ನು ನೀಡಿದರು.
ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ , ಉಪಾಧ್ಯಕ್ಷ ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಹಾಗೂ ಸಂಘದ ಪದಾಧಿಕಾರಿಗಳು ಬಹರೈನ್ ದ್ವೀಪ ದೇಶದ ಸಮಸ್ತ ಕನ್ನಡಿಗರ ಪದವಾಗಿ ಭಾಗವಹಿಸಿದ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ಸ್ಮರಣಸಂಚಿಕೆ “ಕಾವೇರಿ 2024” ಯನ್ನು ಬಿಡುಗಡೆಗೊಳಿಸಲಾಯಿತು.
ಸಂಘದ ಕಲಾವಿದರಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮ ಸುಮಾರು 800 ಮಿಕ್ಕಿ ನೆರೆದಿದ್ದ ಕನ್ನಡಿಗರನ್ನು ಮನರಂಜಿಸಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now