ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 20

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 20

0Shares

ನಾ ಸೋತಿರಬಹುದು….ಇನ್ನೂ ಸತ್ತಿಲ್ಲ ನೆನಪಿರಲಿ …

ಆತ ಮಿಕ್ಸಡ್ ಜ್ಯೂಸು ಮಾಡಿ ಮಾರುತಿದ್ದ ..ಅಂದು ದ್ರಾಕ್ಷಿ,ದಾಳಿಂಬೆ,ಚಿಕ್ಕು,ಮಾವು ಲಿಂಬೆ ಎಲ್ಲವನ್ನು ಮಿಕ್ಸಿಅಲ್ಲಿ ಹಾಕಿ …ಅದಕ್ಕೆ ಒಂದು ಕೊಳೆತ ಬಾಳೆ ಹಣ್ಣನ್ನು ಮಿಕ್ಸ್ ಮಾಡುತ್ತಾನೆ ಅಷ್ಟು ಹಣ್ಣು ಗಳೊಂದಿಗೆ ಮಿಕ್ಸ್ ಆಗುವಾಗ ಕೊಳೆತ ಬಾಳೆಹಣ್ಣು ಏನೂ ಸಮಸ್ಯೆ ಯಾಗದು ಎಂಬುದು ಇವನ ಲೆಕ್ಕಚಾರ….

ಆದರೆ ಕೊಳೆತ ಬಾಳೆಹಣ್ಣು ನಮ್ಮೊಂದಿಗೆ ಸೇರುವುದು ದಾಳಿಂಬೆ ,ದ್ರಾಕ್ಷಿ ,ಚಿಕ್ಕು ,ಮಾವು ಲಿಂಬೆ ಮುಂತಾದ ಹಣ್ಣುಗಳಿಗೆ ಇಷ್ಟ ವಿರಲಿಲ್ಲ ಅವು ಮೂಗು ಮುಚ್ಚಿ ಮುಖ ತಿರುಗಿಸಿ ನಿಂತಿದ್ದವು .ಬಾಳೆ ಹಣ್ಣಿಗೆ ನಿಜಕ್ಕೂ ಬೇಸರವಾಗಿತ್ತು ನಾನು ಕೊಳೆತಿಲ್ಲ ಹಣ್ಣು ಹೆಚ್ಚಾದ್ದರಿಂದ ಕಪ್ಪಾಗಿದೆ ಸ್ವಲ್ಪ ನುಜ್ಜುಗುಜ್ಜಾಗಿದೆ ಅಷ್ಟೇ ಹೇಳ ಬೇಕೆಂದು ಕೊಂಡಿತು ಆದರೆ ಅದರ ಮಾತು ಕೇಳಲು ಯಾರೊಬ್ಬರೂ ಅಲ್ಲಿ ತಯಾರಿರಲಿಲ್ಲ😔 ಎಲ್ಲ ಕಿವಿ ಮುಚ್ಚಿಯೇ ನಿಂತಿದ್ದರು .ಬಾಳೆ ಹಣ್ಣಿಗೆ ತುಂಬಾ ಬೇಸರ ವಾಗಿತ್ತು …😔😔

ಅಷ್ಟರಲ್ಲಿ ಮಿಕ್ಸಿ ಆನ್ ಆಗಿತ್ತು ಎಲ್ಲ ಹಣ್ಣು ಐಸ್ಕ್ರೀಂ ಸಕ್ಕರೆ ಹಾಲಿನೊಂದಿಗೆ ಮಿಕ್ಸ್ ಆಗಿ ಜ್ಯೂಸು ತಯಾರಾಗಿತ್ತು ಕುಡಿದವರು ಆಹಾ ಸೂಪರ್ ಇಲ್ಲಿ ಉಳಿದ ಹಣ್ಣು ಗಳೊಂದಿಗೆ ಸೇರಿದ್ದ ಬಾಳೆಹಣ್ಣು ಈ ಜ್ಯೂಸು ಅನ್ನು ಸ್ಪೆಷಲ್ ಮಾಡಿತ್ತು ಸೂಪರ್ ಎಂದರು👌👌

ಅಲ್ಲೇ ಟೇಬಲ್ ಮೇಲಿದ್ದ ಹಣ್ಣು ಗಳು ಬಾಯಿ ಬಿಟ್ಟು ನೋಡ ಹತ್ತಿದವು..ಬಾಳೆ ಹಣ್ಣು ಮಾತ್ರ ಈ ಬಾರಿ ರಾಜಾರೋಷವಾಗಿ ಕುಳಿತಿತ್ತು.ನಮಗೂ ಒಂದು ದಿನ ಅಂತ ಇರುತ್ತವೆ..ಅಲ್ಲಿಯ ತನಕ ಕಾಯಬೇಕು ಎಂಬ ಸತ್ಯದ ಅರಿವಾಗಿತ್ತು ಬಾಳೆಹಣ್ಣಿಗೆ..

ಕೂಗಿ ಹೇಳಿತ್ತು

ನಾ ಸೋತಿರಬವುದು…ಇನ್ನೂ
ಸತ್ತಿಲ್ಲ. ನೆನಪಿರಲಿ ..
🙏🙏🙏🙏🙏

ಸಮಾಜದಲ್ಲಿ ನಾವು ಸೋತಾಗ ನೂರಾರು ಕೈಗಳು ನಮ್ಮನ್ನು ಅಪಹಾಸ್ಯ ಮಾಡಿರುತ್ತದೆ…ಎಲ್ಲದಕ್ಕೂ ತಾಳ್ಮೆ ಇಟ್ಟಿರಿ …ಕಠಿಣ ಪರಿಶ್ರಮ ಹಾಗೆ ಸೋಲಿನಿಂದ ಕಲಿಯುವ ಮನಸ್ಥಿತಿ ನಿಮ್ಮದಾಗಿದ್ದರೆ ನಿಮ್ಮ ದಿನ ವೊಂದು ಬಂದೇ ಬರುತ್ತದೆ ….ಆ ದಿನ ಅಂದು ನಿಮ್ಮನ್ನು ಅಪಹಾಸ್ಯ ಮಾಡಿದವರೇ ಅಸೂಹೆ ಪಟ್ಟು ಕೊಳ್ಳುವುದನ್ನು ನೀವೇ ನೋಡಬಹುದು …
ಹಾಗಾಗಿ ಸೋತಾಗ ನಿಮಗೆ ನೀವೇ ಗಟ್ಟಿಯಾಗಿ ಹೇಳಿಕೊಳ್ಳಿ 👌👌…

ನಾ ಸೋತಿರಬಹುದು …ಇನ್ನೂ
ಸತ್ತಿಲ್ಲ ನೆನಪಿರಲಿ🙏🙏

🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯಗಳನ್ನು ವಾಟ್ಸಪ್ ನಲ್ಲಿ ನನ್ನೊಂದಿಗೆ ಹಂಚಿಕೊಳ್ಳಿ
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now