ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 18

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 18

0Shares

ನಾಳೆ ಸಾಯುವವ ಯಾರು ಎಂದು ನಿನಗೇ ಗೊತ್ತಿಲ್ಲದ ಮೇಲೆ,ಬೇರೆಯವರ ಸಾವಿನ,ಭವಿಷ್ಯ,ಜಾತಕ ನಿರ್ಣಯಿಸಲು ನೀನು ಯಾರು?

ಆತ ಮನೋಹರ ನೋಡಲು ಸಲ್ಮಾನ್ ಖಾನ್ ನಂತೆ ದೇಹ ಹೊಂದಿದ ಮಸಲ್ ಮ್ಯಾನ್. ಕೊಬ್ಬಿನ ಒಂದು ಕಣವೂ ಇರಲಿಲ್ಲ ಅವನಲ್ಲಿ..ಆತನ ಗೆಳೆಯ ವಿನೋದ್ ನೋಡಲು ತದ್ವಿರುದ್ದ ಡೊಳ್ಳು ಹೊಟ್ಟೆಯ ದಡೂತಿ ಮನುಷ್ಯ ಇಬ್ಬರದೂ ಹೆಚ್ಚು ಕಮ್ಮಿ 50 ರ ವಯಸ್ಸು ..

ಪ್ರತಿ ದಿನ ವಾಕ್ ಒಟ್ಟಿಗೆ ಹೋಗುತಿದ್ದರು.ಮನೋಹರ 1ಗಂಟೆ 30 ನಿಮಿಷ ವಾಕ್ ಮಾಡುತಿದ್ದ .ವಿನೋದ 45 ನಿಮಿಷಕ್ಕೆ ಮುಗಿಸುತಿದ್ದ ಆಮೇಲೆ 45 ನಿಮಿಷ ಸಮೀಪದಲ್ಲೇ ಇದ್ದ ದೇವಾಲಯಕ್ಕೆ ಹೋಗಿ ಆಮೇಲೆ ಒಟ್ಟಿಗೆ ವಾಪಾಸ್ ಹೋಗುತಿದ್ದರು ..

ಕಳೆದ 6 ತಿಂಗಳಿನಿಂದ ನಿತ್ಯ ಒಟ್ಟಿಗೆ ವಾಕ್ ಹೋಗುತಿದ್ದರು
ಪ್ರತಿ ದಿನ ಮೋನೋಹರ ,ವಿನೋದನಿಗೆ ಬಯ್ಯುತಿದ್ದ ಅವನ ಡೊಳ್ಳು ಹೊಟ್ಟೆ ಕೊಬ್ಬನ್ನು ನೋಡಿ ತಮಾಷೆ ಮಾಡುತಿದ್ದ.ನೋಡು ಹೀಗೆ ಆದರೆ ಬೇಗ ಸಾಯುವಿ ನೀನು ನೋಡಲು ಅಸಹ್ಯ ಕಾಣುವೆ, ಎಂದು ಪದೇ ಪದೇ ಹೇಳುತಿದ್ದ ನೋಡು 45 ನಿಮಿಷ ದೇವಸ್ಥಾನಕ್ಕೆ ಹೋಗಿ ಸಮಯ ವ್ಯರ್ಥ ಮಾಡಬೇಡ ನನ್ನೊಂದಿಗೆ ದೇಹ ದಂಡಿಸು ನೋಡು ಕೊಬ್ಬನ್ನು ಕರಗಿಸಿಕೊ ಈ ಭೂಮಿ ಮೇಲೆ ನಿನ್ನ ಆಯುಷ್ಯ ವನ್ನು ಹೆಚ್ಚು ಮಾಡು …ಎಂದು ಪದೇ ಪದೇ ಹೇಳಿ ವಿನೋದನಿಗೆ ತನ್ನ ದೇಹ ಕನ್ನಡಿಯಲ್ಲಿ ನೋಡಲು ಅಸಹ್ಯ ವೆನಿಸುವಂತೆ ಮಾಡಿ ಬಿಟ್ಟಿದ್ದ 😔 ..ಆದರೆ ದೇವರ ಬಗ್ಗೆ ಅವನಾಡಿದ ಮಾತು ಗಳ ಬಗ್ಗೆ ಬೇಸರವಿತ್ತು ವಿನೋದನಿಗೆ😔😔

ಅಂದು ಕೂಡ ವಾಕಿಂಗ್ ಬೇಗ ಮುಗಿಸಿ ವಿನೋದ ದೇವಾಲಯಕ್ಕೆ ಹೋಗಿದ್ದ ಮನೋಹರ ಮುಂದೆ ವಾಕ್ ಮುಂದುವರಿಸಿದ್ದ ..ಆದರೆ ಪೂಜೆ ಮುಗಿಸಿ ಹೊರಗೆ ಬಂದರೆ ಅಲ್ಲಿ ಆಘಾತ ವೊಂದು ಕಾದಿತ್ತು🥱🥱 …ತುಂಬಾ ಜನ ಸೇರಿದ್ದರು ಹೋಗಿ ನೋಡಿದರೆ ಮನೋಹರ ಬಿದ್ದಿದ್ದ ಮೂರ್ಛೆ ತಪ್ಪಿ, ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು …ಅಲ್ಲಿ icu ಅಲ್ಲಿ ದಾಖಲಿಸಲಾಯಿತು..ಅವನ ಮನೆಯವರನ್ನು ಕರೆತಂದಿದ್ದ ವಿನೋದ , ಅರ್ಧ ಗಂಟೆಯ ಬಳಕ ಅಲ್ಲಿಗೆ ಬಂದ ವೈದ್ಯರು ಸಾರೀ …ಅವರಿಗೆ ಮಾಸ್ಸಿವ್ ಹಾರ್ಟ್ ಅಟ್ಯಾಕ್ ಬಂದಿತ್ತು ಉಳಿಸಿಕೊಳ್ಳಲಾಗಲಿಲ್ಲ😔😔 ಎಂದಾಗ ಆತನ ಪತ್ನಿಯ ಕೂಗು ಮುಗಿಲು ಮುಟ್ಟಿತ್ತು..

“ದೇವಸ್ಥಾನಕ್ಕೆ ಹೋಗಿ ಸಮಯ ವ್ಯರ್ಥ ಮಾಡುವ ಬದಲು ನನ್ನೊಂದಿಗೆ ದೇಹ ದಂಡಿಸು ಭೂಮಿ ಮೇಲೆ ಇನ್ನಷ್ಟು ದಿನ ಜೀವಿಸಬಹುದು😔
ಎಂದಿದ್ದ ಮನೋಹರನ ಕೊನೆಯ ಮಾತುಗಳು ವಿನೋದನ ಕಿವಿಯಲ್ಲಿ ಇನ್ನೂ ಗುಯ್ ಗುಟ್ಟುತಿತ್ತು .😔😔.

ನೆನಪಿಡಿ ಗೆಳೆಯರೇ,ಜೀವನ ನಮ್ಮದು,ಜೀವ ನಮ್ಮದಲ್ಲ..ಹಾಗಿದ್ದಮೇಲೆ ನಾನು ಫಿಟ್ ಇದ್ದೇನೆ,ನಾನು ಆರೋಗ್ಯವಂತ,ನನ್ನ ಬಳಿ ದುಡ್ಡಿದೆ,ನನ್ನ ಜಾತಕ ತುಂಬಾ ಉತ್ತಮವಿದೆ ನನ್ನ ಆಯಸ್ಸು ಇನ್ನು ಉತ್ತಮವಿದೆ ,ಆತ ಕುರೂಪಿ,ದಡೂತಿ,ಕೆಟ್ಟ ಜಾತಕದ,ಅಪಶಕುನಿ,ಬಡವ,ರೋಗಿ ಬೇಗ ಸಾಯುತ್ತಾನೆ ಹಾಗೆ ಹೀಗೇ ಎಂದು ನಿಮ್ಮಷ್ಟಕ್ಕೆ ನೀವೇ ನಿರ್ದರಿಸದಿರಿ😡 ಯಾಕೆಂದರೆ 40 ವರ್ಷಕ್ಕೆ ಹಾರ್ಟ್ ಅಟ್ಯಾಕ್ ಅಲ್ಲಿ ತೀರಿಕೊಂಡ ಕೊಬ್ಬಿಲ್ಲದ,ಸ್ಲಿಮ್,ಫಿಟ್ ಬಾಡಿ ಅದೆಷ್ಟೋ ಜನ ನಮ್ಮಲ್ಲೇ ಇದ್ದಾರೆ ಹಾಗೆ 90 ದಾಟಿದ ಕೊಬ್ಬಿರುವ 100 ಕೆಜಿ ಮೇಲೆ ಇರುವ ಅದೆಷ್ಟೋ ಮಂದಿ ಕೂಡಾ ಇಲ್ಲೇ ಇದ್ದಾರೆ ಹಾಗೆ ಜಾತಕ ನೋಡಿ,ಅದ್ದೂರಿಯಾಗಿ ಮದುವೆ ಆಗಿ ಒಂದು ವರ್ಷ ದೊಳಗೆ ಡೈವೋರ್ಸ್ ಅಗಿರುವ ಜೋಡಿ ಗಳೂ ಹಾಗೆ ಜಾತಕವನ್ನೇ ನೋಡದೆ,ದೇವಸ್ಥಾನ ದಲ್ಲಿ 4 ಜನರ ಸಮ್ಮುಖದಲ್ಲಿ ಮದುವೆಯಾದ 10 ವರ್ಷ ಮುಗಿದರೂ ಆದರ್ಶವಾಗಿ ಬದುಕುವ ಜೋಡಿ ಗಳೂ ನಮ್ಮದೇ ಸಮಾಜದಲ್ಲಿ ಇದ್ದಾರೆ.

ಇಲ್ಲಿ ಅದೆಷ್ಟೋ ಉತ್ತರ ವಿಲ್ಲದ ಪ್ರಶ್ನೆಗಳು ಇರುವಾಗ .ಹುಟ್ಟು ಸಾವಿನ ಜನ್ಮರಹಸ್ಯ ತಿಳಿದಿಲ್ಲ ದಿರುವಾಗ,ನಿರ್ಮಲ ಮನಸ್ಸಿನ ಲ್ಲಿ ಭಗವಂತನ ಲೀಲೆಗಳನ್ನು ನೆನೆಯುತ್ತ ಇದ್ದಷ್ಟು ದಿನ ಖುಷಿ ಖುಷಿಯಾಗಿ ಇನ್ನೊಬ್ಬರಿಗೆ ಮೋಸ ಮಾಡದೇ ಬದುಕಿದರೆ ಮಾತ್ರ ನಮ್ಮ ಬದುಕು ಸಾರ್ಥಕ ಅಲ್ಲವೇ ?

…ಹಾಗಾಗಿ ಕಿವಿ ತೆರೆದು ಕೇಳಿ🙏🙏 ..

ನಾಳೆ ಸಾಯುವವ ಯಾರು ಎಂದು ನಮಗೇ ಗೊತ್ತಿಲ್ಲದ ಮೇಲೆ ,ಬೇರೆಯವರ ಸಾವಿನ,ಭವಿಷ್ಯದ ಜಾತಕ ಬರೆಯಲು ನೀನು ಯಾರು ?? 🙏🙏
🔴🔴🔴🔴🔴🔴

ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯ ಗಳನ್ನು ನೇರವಾಗಿ ನನಗೆ ವಾಟ್ಸಪ್ ಮಾಡಿ
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now