ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್, ಮುದರಂಗಡಿ ಕ್ಯಾಥೋಲಿಕ್ ಸಭಾ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಸಂಪನ್ನ

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್, ಮುದರಂಗಡಿ ಕ್ಯಾಥೋಲಿಕ್ ಸಭಾ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಸಂಪನ್ನ
0Shares

ಮುದರಂಗಡಿ: ಕ್ಯಾಥೋಲಿಕ್ ಸಭಾ ಮುದರಂಗಡಿ ಘಟಕದ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆಯನ್ನು ಭಾನುವಾರ, ನವೆಂಬರ್ 15, 2026 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 9:30 ಗಂಟೆಗೆ ಹಿರಿಯ ನಾಗರಿಕರಿಗಾಗಿ ಪಾಪ ನಿವೇದನ ಸಂಸ್ಕಾರ ನಡೆಯಿತು. ಬಳಿಕ 10:00 ಗಂಟೆಗೆ ಪವಿತ್ರ ಬಲಿ ಪೂಜೆಯನ್ನು ಅರ್ಪಿಸಲಾಯಿತು.ಚರ್ಚ್ ಧರ್ಮಗುರುಗಳೊಂದಿಗೆ ಪ್ರಧಾನ ಯಾಜಕರಾಗಿ ಫಾ. ವಾಲ್ಟರ್ ಮೆಂಡೋನ್ಸ್ ಅವರು ಬಲಿ ಪೂಜೆಯನ್ನು ಅರ್ಪಿಸಿದರು.
ನಂತರ 11:00 ಗಂಟೆಗೆ ಲಘು ಉಪಹಾರ ನೀಡಿ, ಘಟಕದ ಅಧ್ಯಕ್ಷರು ವೀಳ್ಯದೆಲೆ ಮತ್ತು ತಂಪು ಪಾನೀಯ ನೀಡಿ ಸ್ವಾಗತಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ 70 ವರ್ಷ ಮೇಲ್ಪಟ್ಟ 80 ಕ್ಕೂ ಹೆಚ್ಚು ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಒಟ್ಟು 135 ಜನರು ಹಾಜರಿದ್ದರು.

ಕ್ಯಾಥೋಲಿಕ್ ಸಭಾ ಅಧ್ಯಕ್ಷ ಸುನಿಲ್ ಸೋಜ ಅವರ ಅಧ್ಯಕ್ಷತೆಯಲ್ಲಿ, ಆತ್ಮಿಕ ನಿರ್ದೇಶಕ ಫಾ. ವಿನ್ಸೆಂಟ್ ಕುವೆಲ್ಲೊ ಅವರೊಂದಿಗೆ ವೇದಿಕೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಮುಖ ಪೋಷಕ ಮೈಕಲ್ ರಮೇಶ್ ಡಿಸೋಜ, ಮುಖ್ಯ ಅತಿಥಿ ಆಲ್ವಿನ್ ದಾಂತಿ ಪೆರ್ನಾಲ್, ಚರ್ಚ್ ಗೋವ್ಳಿಕ್ ಮಂಡಳಿಯ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ, ಕ್ಯಾಥೋಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ಕ್ಯಾಥೋಲಿಕ್ ಸಭೆಗೆ ಮತ್ತು ಹಿರಿಯ ನಾಗರಿಕರಿಗೆ ಶುಭ ಹಾರೈಸಿದರು

ಅನಿತಾ ಡಿಸೋಜ ಕಾರ್ಯಕ್ರಮ ನಿರೂಪಣೆ ಮಾಡಿದರು. ಜೆಸಿಂತ ಡಿಸೋಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಫೆರ್ನಾಂಡಿಸ್ ಅವರು ವರದಿ ವಾಚಿಸಿದರು. ಅಧ್ಯಕ್ಷ ಸುನಿಲ್ ಡಿಸೋಜ ಅವರು ಧನ್ಯವಾದ ಸಮರ್ಪಿಸಿದರು. ಹಿರಿಯ ನಾಗರಿಕರ ದಿನಾಚರಣೆಗೆ ಸಹಕರಿಸಿದ ದಾನಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ಹಲವು ಅಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಆಲ್ವಿನ್ ದಾಂತಿ ಪೆರ್ನಾಲ್ ಅವರು ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಿ, ಮನರಂಜನೆ ನೀಡಿ, ವಿವಿಧ ಆಟಗಳನ್ನು ನಡೆಸಿ ಅವರ ಮನಸ್ಸನ್ನು ಸಂತೋಷಪಡಿಸಿದರು. ಕ್ಯಾಥೋಲಿಕ್ ಸಭಾ ಸದಸ್ಯರಿಂದ ಹಾಡು – ನೃತ್ಯ ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮಕ್ಕೆ ಹಾಜರಿದ್ದ ಹಿರಿಯ ನಾಗರಿಕರಿಗೆ ವಿಶೇಷ ಸ್ಮರಣಿಕೆ ನೀಡಲಾಯಿತು. ಕೊನೆಯಲ್ಲಿ ರುಚಿಕರವಾದ ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now