3ನೇ ಟೆಸ್ಟ್​ಗೂ ಮಳೆಯ ಆತಂಕ ,ಮುಂಬೈ ಪಿಚ್ ಯಾರಿಗೆ ಸಹಕಾರಿ?

3ನೇ ಟೆಸ್ಟ್​ಗೂ ಮಳೆಯ ಆತಂಕ ,ಮುಂಬೈ ಪಿಚ್ ಯಾರಿಗೆ ಸಹಕಾರಿ?

0Shares

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವಾಗಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವು ಶುಕ್ರವಾರ, ನವೆಂಬರ್ 1 ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಪ್ರವಾಸಿ ತಂಡ ಈ ಪಂದ್ಯವನ್ನು ಗೆದ್ದು ಟೀಂ ಇಂಡಿಯಾವನ್ನು ವೈಟ್​ವಾಶ್ ಮಾಡುವತ್ತ ಕಣ್ಣಿಟ್ಟಿದೆ. ಸರಣಿಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ 2-0 ಮುನ್ನಡೆ ಸಾಧಿಸಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇತ್ತ ಮುಂಬೈನಲ್ಲಿ ಕಿವೀಸ್ ತಂಡವನ್ನು ಸೋಲಿಸುವ ಮೂಲಕ ಹೀನಾಯ ಸೋಲಿನಿಂದ ಪಾರಾಗುವ ಇರಾದೆಯಲ್ಲಿ ರೋಹಿತ್ ಪಡೆ ಇದೆ. ಟೀಮ್ ಇಂಡಿಯಾ ಈಗಾಗಲೇ ತನ್ನ 12 ವರ್ಷಗಳ ಸುದೀರ್ಘ ಗೆಲುವಿನ ಸರಣಿಗೆ ಬ್ರೇಕ್ ಹಾಕಿದ್ದು, ಇದೀಗ ರೋಹಿತ್ ಶರ್ಮಾ ಪಡೆ ಸರಣಿಯನ್ನು 2-1 ಅಂತರದಿಂದ ಕೊನೆಗೊಳಿಸಲು ಬಯಸಿದೆ. ಆದರೆ ಅದಕ್ಕೂ ಮುನ್ನ ಮುಂಬೈ ಪಿಚ್ ಯಾರಿಗೆ ಸಹಕಾರಿ ಹಾಗೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now