ಕಾಲ ನೋವು ಕಾಲಲ್ಲೇ ಇರಲಿ ತಲೆಗೇರದಿರಲಿ 🙏
ಉಮೇಶ ಅಂದು ನನ್ನ ಕ್ಲಿನಿಕ್ ಗೆ ಕುಂಟುತ್ತಾ ಬಂದಿದ್ದ ಮುಖ ಬಾಡಿತ್ತು ..ಏನು ಎಂದೇ ಸುಮಾರು 4 ದಿನದಿಂದ ಹ್ಹ್ಯಾಮ್ಸ್ಟ್ರಿಂಗ್ ಮಸಲ್ಸ್ ಅಲ್ಲಿ ನೋವಿತ್ತು ಆತನಿಗೆ, ಅದು ಕ್ಯಾಲ್ಸಿಯಂ ನ ಕೊರತೆ ಇಂದ ಅಥವ ,ಮಾಂಸ ಖಂಡ ದ ಸಾಮಾನ್ಯ ನೋವಾಗಿತ್ತು ಆದರೆ ಉಮೇಶ ನ ತಲೆ ಒಳಗೆ ಕ್ಯಾನ್ಸರ್ ನ ನೋವು ಎಂಬ ಭೂತ ಆವರಿಸಿತ್ತು😔😔 ….
ಉಮೇಶ ನಿನಗೊಂದು ಹೇಳುತ್ತೇನೆ ಕೇಳು ಎಂದೇ ಆತ ಕತೆ ಕೇಳುವ ಮೂಡ್ ಅಲ್ಲಿ ಇರಲಿಲ್ಲ ….
ಸುಮಾರು 5 ವರ್ಷದ ಕೆಳಗೆ ನನ್ನ ಕ್ಲಿನಿಕ್ ಗೆ ಸಂಜೆ ಹೊತ್ತು ಒಬ್ಬ ರೋಗಿ ಬಂದಿದ್ದ ಕಂಠ ಮಟ್ಟ ಕುಡಿದಿದ್ದ ..ಮನೆ ಸಮೀಪ ಒಂದು ಹಾವು ಕಚ್ಚಿದೆ ಎಂದ ತನ್ನ ಎಡ ಕೈಯಲ್ಲಿ ಕಚ್ಚಿದ ಹಾವನ್ನ ಕೊಂದು ತಂದಿದ್ದ …ಭಯಂಕರ ವಿಷದ ಹಾವು ಅದಾಗಿತ್ತು ತಕ್ಷಣ ಆಸ್ಪತ್ರೆ ಸೇರಿಸಿದೆ ..ಆಂಟಿ ಸ್ನೇಕ್ ವಿನೋರಂ ತಕ್ಷಣ ಆರಂಭಿಸಿದರು ರೋಗಿ ಬದುಕಿ ಉಳಿದಿದ್ದ …
ಅದೇ ಒಂದು ತಿಂಗಳ ಬಳಿಕ ಇನ್ನೊಬ್ಬ ರೋಗಿಯೊ ಬ್ಬರು ಬಂದಿದ್ದರು ಏನೋ ಕಚ್ಚಿತ್ತು ನೋಡಿದರೆ ವಿಷ ರಹಿತ ಹಾವು ಕಚ್ಚಿದ್ದೀರ ಬಹುದೇನೋ ಎಂಬಂತಿತ್ತು , ಸಂದೇಹ ಬೇಡ ಎಂದು ಆಸ್ಪತ್ರೆಗೆ ಕಳುಹಿಸಿದ್ದೆ ಆ ಮನುಷ್ಯ ತುಂಬಾ ಹೆದರಿಕೆಯ ಮನುಷ್ಯ ನಾಗಿದ್ದ ಆಸ್ಪತ್ರೆ ಯಲ್ಲಿ ಗಂಟೆಗೊಮ್ಮೆ ಕ್ಲೋಟಿಂಗ್ ಟೈಮ್ ,ಬ್ಲೀಡಿಂಗ್ ಟೈಮ್ ನೋಡ ಬೇಕಿತ್ತು 5 ರಿಂದ 6 ಗಂಟೆ ಒಬ್ಸರ್ವ್ ಮಾಡಿ ಮನೆಗೆ ಕಳುಹಿಸುತ್ತಾರೆ ಮೊದಲ 2 ಬಾರಿ ಮಾಡಿದಾಗ ನಾರ್ಮಲ್ ಇತ್ತು ..ಆದರೆ ಪ್ರತಿ ಬಾರಿ ಪರೀಕ್ಷಿಸುವಾಗಲು ಹೆದರಿಕೆ ಇಂದ ಆತನ ಮುಖ ಭಾವ ಬದಲಾಗುತಿತ್ತು ..5ನೇ ಭಾರಿ ಮಾಡುವಾಗ ಆತ ತಲೆ ತಿರುಗಿದ್ದ ,ಬಿಪಿ ಲೊ ಆಗಿತ್ತು …ಸಂಜೆ ಆತ ತೀರಿಕೊಂಡಿದ್ದ ….ಈ ವಾಕ್ಯ ಕೇಳಿದ ಉಮೇಶ ನ ಕಿವಿಗಳೆರಡೂ ತೆರೆದು ಕೊಂಡಿದ್ದವು😔 …
ನೆನಪಿಡು ಉಮೇಶ ಮೊದಲನೇ ಕೇಸಿನಲ್ಲಿ ವಿಷಯುಕ್ತ ಹಾವಿಂದ ಕಚ್ಚಿಸಿ ಕೊಂಡರೂ ಆತ ಬದುಕಿದ್ದ ಯಾಕೆಂದರೆ ಆತ ಕಾಲಿನ ಗಾಯವನ್ನು ಕಾಲಲ್ಲೇ ಇರಿಸಿದ್ದ ..ಆದರೆ ವಿಷರಹಿತ ಹಾವಿಂದ ಕಚ್ಚಿಸಿ ಕೊಂಡ ಎರಡನೇ ರೋಗಿ ಮರಣಿಸಿದ ಕಾರಣ ಆತನ ಕಾಲಿನ ಗಾಯ ತಲೆಗೆ ಏರಿತ್ತು ಈ ಬಾರಿ ಉಮೇಶ ac ಇಲ್ಲದೆ ಬೆವರುತಿದ್ದ👌👌 ..
ಹಾಗಾಗಿ ನೆನಪಿಡು ಜೀವನದಲ್ಲಿ ಧೈರ್ಯವಂತ ಒಮ್ಮೆ ಮಾತ್ರ ಸಾಯುತ್ತಾನೆ,ಅವರಿವರ ಮಾತು ಕೇಳುವ ಪುಕ್ಕಲ ಮಾತ್ರ ನಿತ್ಯ ಸಾಯುತ್ತಿರುತ್ತಾನೆ ನೆನಪಿಡು …
ಕತೆ ಮುಗಿಯುವಾಗ ಉಮೇಶನ ಕಾಲಿನ ನೋವಿಗೆ ಪರಿಹಾರ ಸಿಕ್ಕಿ ಆಗಿತ್ತು🙏😀 …ನೋವಿಗೆ ಹಾಗೆ ಕ್ಯಾಲ್ಸಿಯಂ ಮಾತ್ರೆ ಗಳನ್ನು ತೆಗೆದುಕೊಂಡ ಉಮೇಶ ಅಲ್ಲಿಂದ ತೆರಳಿದ್ದ..ವಿಶೇಷ ಎಂದರೆ ಹೋಗುವಾಗ ಉಮೇಶ ಕುಂಟುತ್ತಿರಲಿಲ್ಲ 👍👍🙏🙏🙏
ಹೌದು ಕಾಯಿಲೆಯ ಬಗ್ಗೆಯೇ ಇರಬಹುದು, ಜೀವನದ ಬಗ್ಗೆಯೇ ಇರಬಹುದು ಅತಿಯಾದ ಭಯ ನಮ್ಮ ಆಯಸ್ಸನ್ನು ಕಮ್ಮಿ ಮಾಡಲಿದೆ .. ನಾವೆಲ್ಲರೂ ಚಿಕ್ಕ ಚಿಕ್ಕ ವಿಷಯ ಗಳನ್ನು ನಿರ್ಲಕ್ಷಿಸಲು ಮೊದಲು ಕಲಿಯಬೇಕಿದೆ …ನೆನಪಿಡಿ ಹೊಟ್ಟೆ ನೋವು ನಾಯಿ ಗೆ ಬಂದರೆ ಯಾವುದೊ ಹುಲ್ಲು ತಿಂದು ಸರಿ ಮಾಡಿ ಕೊಳ್ಳುತ್ತದೆ..
ಅದೇ ಮನುಷ್ಯನಿಗೆ ಬಂದರೆ usg,ct scan ಎಂದೆಲ್ಲ ಮಾಡಿ ಇರುವ ಇಲ್ಲದ ಕಾಯಿಲೆಯ ಹೆಸರು ಕೊಟ್ಟು …ಆತನ ಜೀವ ಜೀವನ ನರಕವಾಗಿಸುವ ಮುನ್ನ ಪ್ರಾಣಿಗಳಿಂದ ಕಲಿಯುವುದನ್ನು ಕಲಿತರೆ ಖಂಡಿತ ನಮ್ಮ ಆತ್ಮ ಸ್ಥೈರ್ಯ ದೆದುರು ಕ್ಯಾನ್ಸರ್ ,ಕೊರೊನ ದಂತಹ ಕಾಯಿಲೆಗಳು ಕೂಡ ಮಂಡಿಯೂರಲಿದೆ ಹಾಗಾಗಿ ನೆನಪಿಡಿ
…
ಕಾಲ ನೋವು ಕಾಲಲ್ಲೇ ಇರಲಿ ,ತಲೆಗೇರದಿರಲಿ🙏🙏🙏
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಉಡುಪಿ
ಹೋಂ ಡಾಕ್ಟರ್ ಫೌಂಡೇಶನ್
ನಿಮ್ಮ ಪ್ರತಿಕ್ರೀಯೆ ನೇರವಾಗಿ ನನಗೆ ವಾಟ್ಸಪ್ ಮಾಡಿ ..
🔴🔴🔴🔴🔴🔴
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now