
ಶಿರ್ವ: ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿ, ಇವರ ವತಿಯಿಂದ ಏಕಾದಶಿ ಪ್ರಯುಕ್ತ ದಿನಾಂಕ 05-11-2026ನೇ ಗುರುವಾರ ಬೆಳಿಗ್ಗೆ 8:00 ಗಂಟೆಗೆ ಶಿರ್ವ ಶ್ರೀ ಕಾಶೀಮಠದ ಶ್ರೀ ಮಹಾಲಸಾ ದೇವಿಯ ಸನ್ನಿಧಿಯಲ್ಲಿ ಏಕಾಹ ಭಜನಾ ಮಂಗಲೋತ್ಸವ ಕಾರ್ಯಕ್ರಮ ಜರುಗಲಿದೆ.
ಶ್ರೀ ಕಾಶೀಮಠ ಸಂಸ್ಥಾನ ವಾರಣಾಸಿ ಮಠಾಧಿಪತಿ ಶ್ರೀ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ದೀಪ ಪ್ರಜ್ವಲನೆಯ ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ಪ್ರಾರಂಭವಾಗಲಿದ್ದು, ರಾತ್ರಿ 9:00 ಗಂಟೆಗೆ ಶ್ರೀ ದೇವಿಗೆ ವಿಶೇಷ ಪೂಜೆ ನೆರವೇರಿದ ನಂತರ ಭಜನಾ ಸೇವೆ ಮುಕ್ತಾಯಗೊಳ್ಳಲಿದೆ.
ಈ ಮಹಾ ಸಂಕೀರ್ತನೆಯ ಸೇವಾ ಕೈಂಕರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಹಾಗೂ ಶ್ರೀಹರಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಮಂಡಳಿಯ ಅಧ್ಯಕ್ಷರಾದ ಜಿ. ಶ್ರೀನಿವಾಸ ಶೆಣೈ, ಕಾರ್ಯದರ್ಶಿ ಬಿ. ನರಸಿಂಹ ಭಟ್ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು, ಶಿರ್ವ ಮತ್ತು ಹಿತೈಷಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now