ಶಿರ್ವ ಬಂಟಕಲ್ಲಿನಲ್ಲಿ ಹಿಟ್ ಅಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ ಹೊಡೆದು ತಾಯಿ-ಮಗಳಿಬ್ಬರಿಗೆ ಗಾಯ – ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಶಿರ್ವ ಬಂಟಕಲ್ಲಿನಲ್ಲಿ ಹಿಟ್ ಅಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ ಹೊಡೆದು ತಾಯಿ-ಮಗಳಿಬ್ಬರಿಗೆ ಗಾಯ – ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲು
0Shares

ಶಿರ್ವ: ದಿನಾಂಕ 08/10/2026 ರಂದು ಸಂಜೆ 6:40 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ಹಾದು ಹೋಗಿರುವ ಬಂಟಕಲ್‌ – ಹೇರೂರು ಸಾರ್ವಜನಿಕ ರಸ್ತೆಯಲ್ಲಿ ಕಾರು ನಂಬ್ರ KA02-ME-5055 ನೇದರ ಚಾಲಕನು, ಆತನ ಬಾಬ್ತು ಕಾರನ್ನು ಬಂಟಕಲ್‌ ಕಡೆಯಿಂದ ಹೆರೂರು ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿ ಸಹನಾ (24) 92 ಹೇರೂರು ಗ್ರಾಮ, ಕಾಪು ತಾಲೂಕು ಇವರು ಬಂಟಕಲ್‌ ಕಡೆಗೆ ಸಹಸವಾರರಾಗಿ ಕುಳಿತುಕೊಂಡು ಹೋಗುತ್ತಿದ್ದ ಸ್ಕೂಟಿ ನಂಬ್ರ KA20-HB-9334 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯನ್ನು ಸವಾರಿ ಮಾಡುತ್ತಿದ್ದ ಪಿರ್ಯಾದುದಾರರ ತಾಯಿ ಸುಲೋಚನ ಮತ್ತು ಪಿರ್ಯಾದುದಾರರು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು, ಸುಲೋಚನ ಇವರ ಬಲಕೈಯ ಮೂರು ಬೆರಳಿನ ಮೂಳೆ ಮುರಿತ, ಬಲಕಾಲಿಗೆ ಗುದ್ದಿದ ನೋವು ಆಗಿದ್ದು, ಪಿರ್ಯಾದುದಾರರ ಬಲಕಾಲಿಗೆ ಗುದ್ದಿದ ಒಳನೋವು ಆಗಿರುತ್ತದೆ. ಅಪಘಾತದ ಬಳಿಕ ಅಪಘಾತಕ್ಕೆ ಕಾರಣನಾದ ಕಾರು ಚಾಲಕನು ಗಾಯಾಳುಗಳನ್ನು ಆರೈಕೆ ಮಾಡದೇ, ಕಾರು ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 83/2026 ಕಲಂ: 281, 125(a), 125(b) BNS 2023 & U/s 134 (a) &(b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now