
ಗೋವಾ : ಜಿಲ್ಲೆ 317C ಇದರ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇತ್ತೀಚಿಗೆ ಗೋವಾ ಪ್ರವಾಸ ಹಮ್ಮಿಕೊಂಡಿದ್ದು, ಸ್ಥಳೀಯ ಎರಡು ಲಯನ್ಸ್ ಕ್ಲಬ್ಗಳೊಂದಿಗೆ ತ್ರಿ-ಕ್ಲಬ್ ಸ್ನೇಹ ಸಮ್ಮಿಲನ ಸಭೆಯನ್ನು ಗೋವಾದ ಮೀರಾಮಾರ್ ಬೀಚ್ ಬಳಿ ಆಯೋಜಿಸಿತು.

ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ತನ್ನ ವಾರ್ಷಿಕ ಪ್ರವಾಸವನ್ನು ಆಯೋಜಿಸಿದ್ದು, ಅಲ್ಲಿಯ ಸ್ಥಳೀಯ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಪಣಜಿ ಮತ್ತು ಲಯನ್ಸ್ ಕ್ಲಬ್ ಓಲ್ಡ್ ಗೋವಾದ ಸದಸ್ಯರೊಂದಿಗೆ ಸ್ನೇಹ ಸಮ್ಮಿಲನವನ್ನು ನಡೆಸಿತು. ಈ ಸಂದರ್ಭದಲ್ಲಿ ಮೂರು ಕ್ಲಬ್ಬಿನ ಪಿಎಸ್ಟಿ ಮತ್ತು ಸದಸ್ಯರು ತಮ್ಮ ಪರಿಚಯವನ್ನು ಮಾಡಿಕೊಂಡಿದ್ದು, ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ತಮ್ಮ ತಮ್ಮ ಕ್ಲಬ್ಬುಗಳ ಪರವಾಗಿ ಪಿಎಸ್ಟಿ ಗಳಿಗೆ ಅಭಿನಂದಿಸಿ, ಲಯನ್ಸ್ ಪಿನ್ನುಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಮಹಾದೇವ ವರ್ಣೇಕರ್, ವಲಯ ಅಧ್ಯಕ್ಷ ಲಯನ್ ವಿಲ್ಸನ್ ರೋಡ್ರಿಗಸ್, ಪ್ರಮುಖರಾದ ಲಯನ್ ಸುಷ್ಮಾ ಸಾವಂತ್, ಲಯನ್ ಬೆರ್ನ ಪ್ರಭು, ಲಯನ್ ಮರಿಟಾ ಪಿಂಟೊ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಕಾರ್ಯದರ್ಶಿ ಲಯನ್ ಜೋನ್ ಗೋಮ್ಸ್, ಕೋಶಾಧಿಕಾರಿ ಲಯನ್ ವಿಲ್ಫ್ರೆಡ್ ಡಿಸೋಜಾ, ಸ್ಥಾಪಕ ಅಧ್ಯಕ್ಷ ಲಯನ್ ಹೆನ್ರಿ ಡಿಸೋಜಾ, ಪೂರ್ವ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

ತ್ರಿವಳಿ ಕ್ಲಬ್ ಸಮ್ಮೇಳನ ಸಭೆಯನ್ನು ಆಯೋಜನೆ ಮಾಡಿದ್ದ 317C ಇದರ ಕ್ಯಾಬಿನೆಟ್ ಸದಸ್ಯ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಪೂರ್ವ ಅಧ್ಯಕ್ಷ ಲಯನ್ ಜೋನ್ ಫೆರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿದರೆ, ಅಧ್ಯಕ್ಷ ಲಯನ್ ರೋಯ್ಸ್ ಫೆರ್ನಾಂಡಿಸ್ ಧನ್ಯವಾದ ಸಮರ್ಪಿಸಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now