
ಐಪಿಎಲ್‌ನಲ್ಲಿ ವಿವಾದಕ್ಕೆ ಸಿಲುಕಿದ್ದ ಹರ್ಷಿತ್ ರಾಣಾ, ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಣಜಿ ಪಂದ್ಯದಲ್ಲಿ 5 ವಿಕೆಟ್ ಪಡೆದ ರಾಣಾ ಬ್ಯಾಟಿಂಗ್‌ನಲ್ಲಿ 59 ರನ್ ಗಳಿಸಿದ್ದಾರೆ.
ಕೆಲವೇ ಕೆಲವು ತಿಂಗಳ ಹಿಂದೆ ಭಾರತದ ಯುವ ಕ್ರಿಕೆಟಿಗ ಹರ್ಷಿತ್ ರಾಣಾ ಎಂದರೆ ಎಲ್ಲರಿಗೂ ಥಟ್ಟನೇ ನೆನಪಾಗುತ್ತಿದ್ದಿದ್ದು, ಐಪಿಎಲ್ ವೇಳೆ ತನ್ನ ಆಕ್ರಮಣಕಾರಿ ಆಚರಣೆಯಿಂದ, ಶಿಕ್ಷೆಗೆ ಗುರಿಯಾಗಿದ್ದ ಕೆಕೆಆರ್ ತಂಡದ ಬೌಲರ್. ಆದರೀಗ ತನ್ನ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾವನ್ನು ಸೇರಿಕೊಂಡಿರುವ ಹರ್ಷಿತ್ ರಾಣಾ ಕಾಂಗರೂಗಳ ನಾಡಲ್ಲಿ ತನ್ನ ಕೈಚಳಕ ತೊರಲು ಸಜ್ಜಾಗಿದ್ದಾರೆ. ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಪ್ರವಾಸಕ್ಕಾಗಿ ಈಗಾಗಲೇ ಬಿಸಿಸಿಐ ತಂಡವನ್ನು ಸಹ ಪ್ರಕಟಿಸಿದೆ. ಆ ಪ್ರವಾಸಕ್ಕೆ ಇದೇ ಮೊದಲ ಬಾರಿಗೆ ಹರ್ಷಿತ್ ರಾಣಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕೂಡಲೇ ಮಿಂಚಿನ ಪ್ರದರ್ಶನ ನೀಡಿರುವ ಹರ್ಷಿತ್ ರಾಣಾ, ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























