
ಲಯನ್ಸ್ ಕ್ಲಬ್ ತೆಕ್ಕಟ್ಟೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ
ನಿವೃತ್ತ ಶಿಕ್ಷಕ ಸಬ್ಲಾಡಿ ಜಯಕರ ಶೆಟ್ಟಿ ಯವರನ್ನು ಶಾನಾಡಿಯ ಅವರ ನಿವಾಸದಲ್ಲಿ ಗೌರವಿಸಿ ಸನ್ಮಾನ.
ಸುದೀರ್ಘ 26 ವರ್ಷಗಳ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗುಲ್ವಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅವರ ಸೇವೆಯನ್ನು ಸ್ಮರಿಸಿ ಕ್ಲಬ್ ನ ವತಿಯಿಂದ ಶ್ರೀಮತಿ ಮಮತಾ ಮತ್ತು ಶ್ರೀ ಜಯಕರ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.
ಲಯನ್ಸ್ ಕ್ಯಾಬಿನೆಟ್ ಸದಸ್ಯ ಧರ್ಮರಾಜ ಮುದಲಿಯಾರ್ ನಿರೂಪಿಸಿದರು, ಲಯನ್ ರಾಜೇಂದ್ರ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು, ಸ್ಥಾಪಕಾಧ್ಯಕ್ಷ ಕೆ. ಸೀತಾರಾಮ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ಅರುಣ್ ಶೆಟ್ಟಿ ಉಳ್ತೂರು ವಂದಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಸಂಪತ್ ಶೆಟ್ಟಿ ವಕ್ವಾಡಿ,
ಖಜಾಂಚಿ ಚಂದ್ರಕಾಂತ್ ಶೆಟ್ಟಿ, ಸದಸ್ಯರಾದ ಸದಾನಂದ ಹೆಗ್ಡೆ, ಹರ್ಷವರ್ಧನ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಅರುಣ್ ಶೆಟ್ಟಿ, ಸದಾರಾಮ ಶೆಟ್ಟಿ, ರಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು,
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now