
ಕಾರ್ಕಳ: ಕಾರ್ಕಳ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಂಜಾಳ ಮುಕ್ತಾ ನರಸಿಂಹ ಶೆಣೈ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು ಕಿಶೋರಿ ಶೆಣೈ ಇವರು ಸಭಾಂಗಣದ ಉದ್ಘಾಟಣೆ ಹಾಗೂ ಛಾಯಾಚಿತ್ರವನ್ನು ಅನಾವರಣಗೊಳಿ
ಗೊಳಿಸಿದರು ವೆಂಕಟರಮಣ ದೇವಳದ ಒಂದನೇ ಮುಕ್ತೇಸರ
ಜಯರಾಮ ಪ್ರಭು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಸ್.ವಿ.ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಪಿ ಶೆಣೈ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಚಿದಾನಂದ ಶೆಟ್ಟಿ
ಸಭಾಂಗಣಕ್ಕೆ ದೇಣಿಗೆಯನ್ನು ನೀಡಿದ ನಗರ್ ಕಿಶೋರಿ ಶೆಣೈ ಇವರನ್ನು ಪರಿಚಯಿಸಿದರು.
ಹುಟ್ಟೂರಿನ ಶಿಕ್ಷಣಸಂಸ್ಥೆಗೆ ಸಭಾಂಗಣದ ಕೊಡುಗೆ ನೀಡಿ , ಸನ್ಮಾನವನ್ನು ಸ್ವೀಕರಿಸಿದ ನಗರ್ ಕಿಶೋರಿ ಶೆಣೈ ಇವರು ತಮ್ಮ ಅನಿಸಿಕೆಯನ್ನು ಹಂಚಿ ಕೊಂಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ವಿಭಾ ಧೀರಜ್ ನಾಯಕ್, ಬೇಲಾಡಿ ಜಯವಂತ ಕಾಮತ್, ಡಾ ಶೈಲಭ್ ನಗರ್ ಹಾಗೂ ತುಕಾರಾಮ ನಾಯಕ್ ಶುಭ ನುಡಿಗಳನ್ನಾಡಿದರು.
ಟ್ರಸ್ಟ್ ಉಪಾಧ್ಯಕ್ಷ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ
ವಹಿಸಿದ್ದರು.. ಟ್ರಸ್ಟ್ ಕೋಶಾಧ್ಯಕ್ಷ ಐ .ರವೀಂದ್ರನಾಥ ಪೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಗೀತಾ ಜಿ . ಇವರು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಸೀತಾರಾಮ್ ನಾಯಕ್ ವಂದಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಅರ್ಪಿತಾ ಎ ಜೈನ್ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now