
ರಾಷ್ಟ್ರಭಕ್ತಿ ದೇಶಪ್ರೇಮ ಹಾಗೂ ದೇಸೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಯುವಶಕ್ತಿಗಳಲ್ಲಿ , ವಿದ್ಯಾರ್ಥಿ
ಗಳಲ್ಲಿ ಕ್ರೀಡಾ ಪ್ರೇಮ ತುಂಬುವ ಕ್ರೀಡಾ ಭಾರತಿಯ ಸೇವಾ ಮನೋಭಾವನೆ ಶ್ಲಾಘನೀಯವಾದದ್ದು. ಇಂದು ದೇಶಾದ್ಯಂತ ಕ್ರೀಡಾ ಭಾರತಿ ಸಂಸ್ಥೆ ನವಭಾರತ ಹಾಗೂ ವಿಕಸಿತ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಕಾರ್ಕಳ ತಾಲೂಕು ಘಟಕವೂ ಇಂದು ದೇಸೀಯ ಕ್ರೀಡೆಯಾದ ಕಬ್ಬಡಿ ಪಂದ್ಯಾಟವನ್ನು ಆಯೋಜಿಸಿ ಕಾರ್ಕಳದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ಇದು ಮಕ್ಕಳಲ್ಲಿ ಕ್ರೀಡಾ ಸೂರ್ತಿಗೆ ಪ್ರೇರಣೆ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ ಸುನಿಲ್ ಕುಮಾರ್
ಹೇಳಿದರು.
ಅವರು ಕ್ರೀಡಾ ಭಾರತಿ ಕಾರ್ಕಳ ತಾಲೂಕು ಹಾಗೂ ಶ್ರೀಮದ್ ಭುವನೇಂದ್ರ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಭುವನೇಂದ್ರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಜರುಗಿದ ಕಾರ್ಕಳ ತಾಲೂಕು ಪುರಸಭಾ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಕಬಡ್ಡಿ ಪಂದ್ಯಾಟವನ್ನು ದೀಪ ಬೆಳಗಿಸಿ ಕಬ್ಬಡಿ ಅಂಕಣವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಶ್ರೀ ಮಂಜುನಾಥ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಯೋಗೀಶ್ ಹೆಗ್ಡೆ ಸಂಚಾಲಕ ಶ್ರೀ ನರೇಂದ್ರ ಕಾಮತ್ ಕೆ ಆಡಳಿತ ಮಂಡಳಿ ನಿರ್ದೇಶಕ ಶ್ರೀ ಎಸ್ ನಿತ್ಯಾನಂದ ಪೈ ಕ್ರೀಡಾ ಭಾರತಿ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಶ್ರೀ ಶಿವಾನಂದ ಕಾಮತ್ ಶ್ರೀಮದ್ ಭುವನೇಂದ್ರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀ ಆರ್ ನಾರಾಯಣ ಶೆಣೈ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ಕಿಣಿ ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶ್ರೀ ಪ್ರಸನ್ನ ಶೆಣೈ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು .
ಇದೇ ಸಂದರ್ಭದಲ್ಲಿ ಕ್ರೀಡಾ ಭಾರತಿ ಮೈಸೂರು ಮಹಾನಗರ ವಿಶ್ವ ಯೋಗ ದಿನದ ನಿಮಿತ್ತ ಆಯೋಜಿಸಿದ ರಾಜ್ಯಮಟ್ಟದ ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀ ಭುವನೇಂದ್ರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳನ್ನು ಹಾಗೂ ವಲಯ ಮಟ್ಟದ ಕಬ್ಬಡಿ ಪಂದ್ಯಾಟದಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಂತೆಯೇ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರರಾದ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಚೇತನ್ ಹಾಗೂ ತರಬೇತುದಾರ ಶ್ರೀ ಶಶಿಧರ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕ್ರೀಡಾ ಭಾರತಿ ಕಾರ್ಕಳ ತಾಲೂಕು ಕಾರ್ಯದರ್ಶಿ ಶ್ರೀ ಸಂಜಯ ಕುಮಾರ್ ನಿರೂಪಿಸಿದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀ ಆರ್ ನಾರಾಯಣ ಶೆಣೈ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವೀಣಾರವರು ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಧಾರಿಣಿ ಉಪಾಧ್ಯರವರು ವಂದೇ ಮಾತರಂ ಹಾಡಿದರು.
ಬಳಿಕ ಆಗಮಿಸಿದ ಹದಿನೇಳು ತಂಡಗಳ ನಡುವೆ ನಿರಂತರ ಕಬ್ಬಡಿ ಪಂದ್ಯಾಟ ಮುಂದುವರಿಯಿತು.
ಪಂದ್ಯ ಕೂಟಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಕ್ರೀಡಾ ಭಾರತಿ ಕಬಡ್ಡಿ ಆಯೋಜನ ಸಮಿತಿ ಅಧ್ಯಕ್ಷ ಕರ್ನಾಟಕ ಸರಕಾರ ಮಾಜಿ ಸಚಿವರು ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರು ಉಡುಪಿ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್ ಆಗಮಿಸಿ ತಂಡಗಳ ವಿದ್ಯಾರ್ಥಿಗಳನ್ನು ಹಸ್ತಲಾಘನ ಮಾಡಿ ಶುಭ ಹಾರೈಸಿ ಮತ್ತೆ ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಠ್ಯ ಕಲಿಕೆಯ ಜೊತೆಯಲ್ಲಿ ಕ್ರೀಡೆ ಸಾಧನೆಗೆ ಪ್ರೋತ್ಸಾಹ ನೀಡಬೇಕು ನಮ್ಮ ಊರಿನ ಮಕ್ಕಳು ಅಂತರಾಷ್ಟ್ರೀಯ ಒಲಂಪಿಕ್ ಕ್ರೀಡಾ ಸಾಧಕರಾಗಿ ನಾವೆಲ್ಲರೂ ಕಾಣುವಂತಾಗಬೇಕು. ಈ ಮೂಲ ಉದ್ದೇಶದ ಮೂಲಕ ಕ್ರೀಡಾ ಭಾರತಿಯ ಯೋಚನೆ ಯೋಜನೆ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಂದ್ಯಾಟದ ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಉದ್ಯಮಿ ಕಾರ್ಕಳ ಟೈಗರ್ಸ್ ಸಂಸ್ಥಾಪಕ ಶ್ರೀ ಬೋಳ ಪ್ರಶಾಂತ್ ಕಾಮತ್ ಭಾಗವಹಿಸಿ ವಿದ್ಯಾರ್ಥಿಗಳ ಕ್ರೀಡಾ ಸ್ಪೂರ್ತಿ ನೋಡಿದಾಗ ಇಂತಹ ಪ್ರೋತ್ಸಾಹ ಮಾರ್ಗದರ್ಶನ ಹಾಗೂ ಅವಕಾಶ ನೀಡಿದ ಕ್ರೀಡಾ ಭಾರತಿ ಉದ್ದೇಶ ಅದು ನಮಗೆಲ್ಲ ಆದರ್ಶವಾದುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾ ಭಾರತಿ ಜಿಲ್ಲಾ ಅಧ್ಯಕ್ಷ ಶ್ರೀ ಮಂಜುನಾಥ ಶೆಟ್ಟಿ ವಹಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ನರೇಂದ್ರ ಕಾಮತ್ ಕೆ , ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಎಸ್ ನಿತ್ಯಾನಂದ ಪೈ , ಉಡುಪಿ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ , ಕ್ರೀಡಾ ಭಾರತಿ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಕಾಮತ್ ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶ್ರೀ ಪ್ರಸನ್ನ ಶೆಣೈ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀ ಆರ್ ನಾರಾಯಣ ಶೆಣೈ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ಕಿಣಿ ಉಪಸ್ಥಿತರಿದ್ದರು.
ಶಿಕ್ಷಕ ಶ್ರೀ ಗಣೇಶ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀ ದಿವ್ಯಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಇಂದಿರಾ. ಪಿ.ನಾಯಕ್ ಪಂದ್ಯ ವಿಜೇತ ವಿದ್ಯಾರ್ಥಿಗಳ ತಂಡಗಳ ಪಟ್ಟಿ ವಾಚಿಸಿದರು. ಕ್ರೀಡಾ ಭಾರತಿ ತಾಲೂಕು ಕಾರ್ಯದರ್ಶಿ ಶ್ರೀ ಸಂಜಯ ಕುಮಾರ ರವರು ಧನ್ಯವಾದವಿತ್ತರು.
ಯಶಸ್ವಿಯಾಗಿ ನಡೆದ ಕಬ್ಬಡಿ ಪಂದ್ಯಕೂಟದಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ 13 ಶಾಲೆಗಳಿಂದ 17 ಬಾಲಕರ ತಂಡಗಳು ಭಾಗವಹಿಸಿದ್ದವು.
ಪ್ರಾಥಮಿಕ ಶಾಲಾ ಬಾಲಕರ 14 ರ ವಯೋಮಿತಿಯಲ್ಲಿ ನಡೆದ ಪಂದ್ಯದಲ್ಲಿ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಪ್ರಥಮ ಸ್ಥಾನವನ್ನೂ, ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ದ್ವಿತೀಯ ಸ್ಥಾನವನ್ನು ಪಡೆದು ವಿಜಯಿಯಾಯಿತು.
ಪ್ರೌಢ ಶಾಲಾ ಬಾಲಕರ 17 ರ ವಯೋಮಾನದ ವಿಭಾಗದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಪ್ರಥಮ ಸ್ಥಾನವನ್ನೂ ಹಾಗೂ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ದ್ವಿತೀಯ ಸ್ಥಾನವನ್ನು ಪಡೆದು ವಿಜಯಿಯಾಯಿತು.
ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಯಶಸ್ವಿ ಪಂದ್ಯಾಟಕ್ಕೆ ರಾಷ್ಟ್ರೀಯ ಕಬ್ಬಡಿ ತೀರ್ಪುಗಾರರಾದ ಶ್ರೀ ಚೇತನ್ , ಶ್ರೀ ಶಶಿಧರ್ ಶೆಟ್ಟಿ , ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸಂದೇಶ್ , ರಾಜ್ಯ ಮಟ್ಟದ ಕಬಡ್ಡಿ ಆಟಗಾರರಾದ ಕು. ಅನ್ವಿತ, ಕು.ಪ್ರೇಕ್ಷಾ, ಕು.ಜ್ಯೋತಿ, ಕು.ಸಾಕ್ಷಿ ಹಾಗೂ ಭುವನೇಂದ್ರ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ತಾರಾನಾಥ್ ಶೆಟ್ಟಿ ಹಾಗೂ ಕ್ರೀಡಾ ಭಾರತಿ ತಾಲೂಕು ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ ಹಾಗೂ ವಿದ್ಯಾ ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಬಂಧುಗಳು ಸಂಪೂರ್ಣ ಸಹಕರಿಸಿದರು. ಪಂದ್ಯಾಟವು ಶಾಂತಿ ಮಂತ್ರದೊಂದಿಗೆ ಸುಸಂಪನ್ನಗೊಂಡಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now