
ಉಡುಪಿ : ಶ್ರೀ ನಾರಾಯಣ ಗುರು ಯುವ ವೇದಿಕೆ ರಿ. ಉಡುಪಿ ಇದರ ವತಿಯಿಂದ ಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಕಾರ್ಯಕ್ರಮವು ಬಲಾಯಿಪಾದೆ ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ನೆರವೇರಿತು.

ಈ ಸಂಧರ್ಭದಲ್ಲಿ ಶ್ರೀ ನಾರಾಯಣ ಗುರುಗಳ ಭಾವಚಿತ್ರದ ಸ್ಟಿಕರ್ ಬಿಡುಗಡೆ ಮಾಡಿದ ಶ್ರೀ ನಾರಾಯಣ ಗುರು ವಿಚಾರಾ ವೇದಿಕೆ ಇದರ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮಾತಾಡಿ, ಈ ದೇಶದಲ್ಲಿ ಇಂದಿಗೂ ಕೂಡ ಅಸ್ಪೃಶ್ಯತೆ, ದೇವಸ್ಥಾನದ ಪ್ರವೇಶಕ್ಕೆ ತಡೆ ಮಾಡುವುದು ಮುಂತಾದ ಹೀನ ಪ್ರವೃತ್ತಿ ಚಾಲ್ತಿಯಲ್ಲಿದೆ. ಇಂದಿಗೂ ನಾವು ಧರಿಸುವ ನಾಮ, ನಾವು ಧರಿಸುವ ಬಟ್ಟೆ, ನಾವು ಆಡುವ ಭಾಷೆಗಳು ನಮ್ಮ ಧಾರ್ಮಿಕ ಚಿಂತನೆಗಳನ್ನು ಹೊಂದಿದೆ. ಆದರೆ ನಾರಾಯಣ ಗುರುಗಳ ಚಿಂತನೆ ಮತ್ತು ತತ್ವದ ಪ್ರಕಾರ ಪ್ರತಿ ಒಬ್ಬ ಮನುಷ್ಯನಿಗೂ ತನ್ನ ಬದುಕನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳುವ ಮತ್ತು ತನ್ನ ಧಾರ್ಮಿಕ ಆಚರಣೆಗಳನ್ನು ಸ್ವತಂತ್ರವಾಗಿ ಆಚರಿಸಿಕೊಳ್ಳುವ ಅವಕಾಶ ಇನ್ನೂ ಕೂಡ ಸಂಪೂರ್ಣವಾಗಿ ಸಿಕ್ಕಿಲ್ಲ. ಅದು ಸಿಗುವ ತನಕ ಶ್ರೀ ನಾರಾಯಣ ಗುರುಗಳ ತತ್ವ ಸಾರುವ ಕೆಲಸ ನಮ್ಮಿಂದ ನಿರಂತರವಾಗಿ ನಡೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.

ಗುರು ಜಯಂತಿ ಕಾರ್ಯಕ್ರಮವನ್ನು ಶ್ರೀ ನಾರಾಯಣ ಗುರುಗಳ ಧ್ವಜವನ್ನು ಮೂರು ಧರ್ಮದ ಪ್ರತಿನಿಧಿಗಳು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಶ್ರೀ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್, ಕಡೆಕಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಜಯಕರ್ ಶೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೃಷ್ಣಮೂರ್ತಿ ಆಚಾರ್ಯ, ದಿವಾಕರ್ ಕುಂದರ್, ದಿನೇಶ್ ಪುತ್ರನ್, ಜಿತೇಂದ್ರ ಶೆಟ್ಟಿ, ಶಬರೀಶ್ ಸುವರ್ಣ, ಗಣೇಶ್ ಕುಮಾರ್ ಸಂಪಿಗೆನಗರ, ಪ್ರಶಾಂತ್ ಪೂಜಾರಿ, ಪ್ರಶಾಂತ್ ಸಾಲಿಯಾನ್, ರಾಘವೇಂದ್ರ ಕುತ್ಪಾಡಿ, ರೋಯ್ಸ್ ಫೆರ್ನಾಂಡಿಸ್, ರಿಯಾಜ್ ಪಳ್ಳಿ, ಸುಜಯ್ ಪೂಜಾರಿ, ದಿವಾಕರ್ ಬೊಳ್ಜೆ, ಶರತ್ ಶೆಟ್ಟಿ, ಹರೀಶ್ ಪೂಜಾರಿ, ಸುನಿಲ್ ಪೂಜಾರಿ ಮಲ್ಪೆ, ನವೀನ್ ಪೂಜಾರಿ ಮಲ್ಪೆ, ಶರತ್ ಪೂಜಾರಿ ಕಲ್ಯಾಣಪುರ, ನಾಗರಾಜ್ ಕಾಮತ್, ಮೋಹನ್ ಸೋನ್ಸ್, ಆರಿಫ್, ಲಕ್ಷ್ಮಣ್ ಸಂಪಿಗೆನಗರ, ಸಚಿನ್ ಸಾಲ್ಯಾನ್, ಸಾಯಿನಾಥ್, ಸಾಯಿ ರಾಜ್, ವೀಣಾ ಪ್ರಕಾಶ್, ಉದಯ ಕರ್ಕೇರಾ, ಸುಪ್ರೀತ್ ಸುವರ್ಣ, ನಿಶಾಂತ್ ಕರ್ಕಡ, ಪ್ರಭಾಕರ್ ಕೋಟ್ಯಾನ್, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು
.
ದಿನೇಶ್ ಜತ್ತನ್ನ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now