
ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ ಆರೋಪಿತೆಯನ್ನು ಆ.18ರ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಹಂಡೇಲ ಮಸೀದಿ ಬಳಿಯ ನಿವಾಸಿ, ದಿ| ಅಬೂಬಕರ್ ಅವರ ಪತ್ನಿ ಸೆಫಿಯಾ (53) ಬಂಧಿಸಲ್ಪಟ್ಟ ಆರೋಪಿ.
ಈಕೆಯ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆ ತಡೆ ಕಾಯಿದೆಯಡಿ 2011ರಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯವು ಈಕೆಯ ವಿರುದ್ದು ಹಲವಾರು ಬಾರಿ ಎಲ್ ಪಿಸಿ ವಾರಂಟ್ ಅನ್ನು ಹೊರಡಿಸಿತ್ತು. ಆದರೂ ಈಕೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಳು. ಈಕೆ ತನ್ನ ಹೆಸರು ಮಾತ್ರವಲ್ಲದೆ ಪತಿಯ ಹೆಸರು ಮತ್ತು ವಿಳಾಸದ ಬಗ್ಗೆಯೂ ಸುಳ್ಳು ಮಾಹಿತಿ ನೀಡಿದ್ದಳು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now