ದಿಗ್ಗಜ ಕೊಂಕಣಿ ಗಾಯಕ ಸಂಗೀತಗಾರ ಮತ್ತು ಸಂಯೋಜಕ ಹೆನ್ರಿ ಡಿಸೋಜ ನಿಧನ

ದಿಗ್ಗಜ ಕೊಂಕಣಿ ಗಾಯಕ ಸಂಗೀತಗಾರ ಮತ್ತು ಸಂಯೋಜಕ ಹೆನ್ರಿ ಡಿಸೋಜ ನಿಧನ
0Shares

ದಿಗ್ಗಜ ಕೊಂಕಣಿ ಗಾಯಕ, ಸಂಗೀತಗಾರ ಮತ್ತು ಸಂಯೋಜಕ ಹೆನ್ರಿ ಡಿಸೋಜಾ (83) ಅವರು ಆಟೊಬುಸ್ಟ್ 14ರ ಶುಕ್ರವಾರದಂದು ಮುಂಬೈನಲ್ಲಿ ನಿಧನರಾದರು. ಇವರು “ಯೇ ಯೇ ಕತ್ರಿನಾ” ಮತ್ತು “ಅಮಿ ದೊಗೀ ಸೆಜಾರಿ”ಯಂತಹ ಸದಾ ಹಸಿರಾಗಿರುವ ಅತ್ಯಂತ ಜನಪ್ರಿಯ ಕೊಂಕಣಿ ಹಾಡುಗಳಿಗೆ ಹೆಸರುವಾಸಿಯಾಗಿದ್ದರು.

1943ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆಯಲ್ಲಿ ಜನಿಸಿದ ಹೆನ್ರಿ ಡಿಸೋಜಾ ಅವರು 1965ರಲ್ಲಿ ಮುಂಬೈಗೆ ತೆರಳಿ, ಅಲ್ಲಿ ಪ್ರಮುಖ ಗಾಯಕ ಮತ್ತು ಸಂಗೀತಗಾರರಾಗಿ ಗುರುತಿಸಿಕೊಂಡರು.

ಸುಮಾರು ಐದು ದಶಕಗಳ ಹಿಂದೆ ಅವರು ರಚಿಸಿದ ‘ಯೇ ಯೇ ಕತ್ರಿನಾ’ ಮತ್ತು ‘ಅಮಿ ದೊಗೀ ಸೆಜಾರಿ’ ಹಾಡುಗಳು ಕೊಂಕಣಿ ಸಂಗೀತ ಪ್ರೇಮಿಗಳ ಮನ ಗೆದ್ದು, ಇಂದಿಗೂ ಅಪಾರ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ.

ತಮ್ಮ ಸುದೀರ್ಘ ಹಾಗೂ ಯಶಸ್ವಿ ಸಂಗೀತ ಪಯಣದಲ್ಲಿ ಹೆನ್ರಿ ಡಿಸೋಜಾ ಅವರು 2,000ಕ್ಕೂ ಹೆಚ್ಚು ಹಾಡುಗಳನ್ನು ಸಂಯೋಜಿಸಿ, ನಿರ್ದೇಶಿಸಿದ್ದರು ಹಾಗೂ ಹಲವಾರು ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ಜೊತೆಗೆ ಆಕಾಶವಾಣಿಯ ಮೂಲಕ 200ಕ್ಕೂ ಹೆಚ್ಚು ಕೊಂಕಣಿ ಹಾಡುಗಳನ್ನು ಹಾಡುವ ಮೂಲಕ ಕೊಂಕಣಿ ಸಂಗೀತದ ಬೆಳವಣಿಗೆ ಮತ್ತು ಪ್ರಸಾರಕ್ಕೆ ಮಹತ್ವದ ಕೊಡುಗೆ ನೀಡಿದ್ದರು.

ವಯೋಸಹಜ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದ ಅವರ ನಿಧನವು ಕೊಂಕಣಿ ಸಂಗೀತ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಅವರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಕೊಂಕಣಿ ಸಂಗೀತದ ಮೂಲಕ ತಮ್ಮನ್ನು ನೆನಪಿಸಿಕೊಳ್ಳುವ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now