ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆ : ಹಾವಂಜೆಯಲ್ಲಿ ಸರ್ಕಾರಿ ಸೇವಕರಿಗೆ ಗ್ರಾಮಸ್ಥರಿಂದ ಸನ್ಮಾನ

ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆ : ಹಾವಂಜೆಯಲ್ಲಿ ಸರ್ಕಾರಿ ಸೇವಕರಿಗೆ ಗ್ರಾಮಸ್ಥರಿಂದ ಸನ್ಮಾನ
0Shares

ಹಾವಂಜೆ : 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಾವಂಜೆ ಗ್ರಾಮದ ಇಬ್ಬರು ಲೈನ್‌ಮ್ಯಾನ್‌ಗಳು ಹಾಗೂ ಓರ್ವ ಪೋಸ್ಟ್‌ಮ್ಯಾನ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಗುವುದು.

ಆಗಸ್ಟ್ 15ರಂದು ಕೀಳಂಜೆ ಶ್ರೀ ನಂದಿಕೇಶ್ವರ ದೇವಸ್ಥಾನದ ವಠಾರದಲ್ಲಿ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸನ್ಮಾನಿತರಾಗಿ ಹಾವಂಜೆ ಗ್ರಾಮದ ಹಿರಿಯ ಲೈನ್‌ಮ್ಯಾನ್ ಸೂರ್ಯ ನಾಯ್ಕ್ ಮಂದರ್ತಿ, ಲೈನ್‌ಮ್ಯಾನ್ ಪ್ರಭು ಈರಪ್ಪ ಕುದರಿ ಹಾಗೂ ಹಾವಂಜೆ ಗ್ರಾಮದ ಪೋಸ್ಟ್‌ಮ್ಯಾನ್ ಶಿವಕುಮಾರ್ (ಜಿ.ಡಿ.) ಅವರನ್ನು ಗೌರವಿಸಲಾಗುವುದು.

ಸೂರ್ಯ ನಾಯ್ಕ್ ಅವರು ಬ್ರಹ್ಮಾವರ ಮೆಸ್ಕಾಂ ಶಾಖೆಯಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸುದೀರ್ಘ ಸೇವಾವಧಿಯಲ್ಲಿ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರೊಂದಿಗೆ ಪ್ರಭು ಈರಪ್ಪ ಕುದರಿ ಹಾಗೂ ಶಿವಕುಮಾರ್ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now