ಮುಂಬಯಿ, ಅ.೧೮: ಉಪನಗರ ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‌ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ (ರಿ.) ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ ವಾರ್ಷಿಕ ೪೭ನೇ ನವರಾತ್ರಿ ಮಹೋತ್ಸವ ಜರಗಿಸಲಾಯಿತು.
ಆ ಪ್ರಯುಕ್ತ ಶ್ರೀ ದೇವಿ ಸನ್ನಿಧಿಯಲ್ಲಿ ಕ್ಷೇತ್ರದ ಅರ್ಚಕ ಸೂಡ ಶ್ರೀ ರಾಘವೇಂದ್ರ ಭಟ್ ಹಾಗೂ ತಂತ್ರಿಗಳಾದ ಶಂಕರನಾರಾಯಣ ತಂತ್ರಿ ಡೊಂಬಿವಲಿ ಇವರಿಂದ ರಂಗಪೂಜೆ ಸೇವೆ, ನವದುರ್ಗಾ ಹೋಮವು ಮಹಾಪೂಜೆ ನೆರವೇರಿಸಿ ಮಂತ್ರಾಕ್ಷತೆ, ಪ್ರತಿದಿನ ಮಧ್ಯಾಹ್ನ ೧೨.೦೦ ಗಂಟೆಗೆ ಹಾಗೂ ರಾತ್ರಿ ೮.೦೦ ಮಹಾಸಭೆ, ತೀರ್ಥ ಪ್ರಸಾದ, ಅನಸಂತರ್ಪಣೆ ನೀಡಲಾಯಿತು. ಸಂಜೆ ಕುಮಾರಿ ದುರ್ಗಾ ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಸಂಭ್ರಮ ಆಚರಿಸಲಾಯಿತು.
ಈ ಶುಭಾವಸರದಲ್ಲಿ ಅಭ್ಯುದಯ ಕೋ.ಅಪರೇಟಿವ್ ಬ್ಯಾಂಕ್ ಆಡಳಿತ ನಿರ್ದೇಶಕ ಪ್ರೇಮನಾಥ ಸಾಲ್ಯಾನ್, ಲಿಬರ್ಟಿ ಶಿಪ್ಪಿಂಗ್ ಆಡಳಿತ ನಿರ್ದೇಶಕ ಆನಂದ ಕೆ.ಕೋಟ್ಯಾನ್, ಕರ್ನಾಟಕ ಸಂಘ ಖಾರ್‌ಘಾರ್ ಅಧ್ಯಕ್ಷ ಯೋಗೇಂದ್ರಮ್ ಕೊಟ್ಟಾರಿ, ಪ್ರಸಾದ ಆರ್.ಕೋಟ್ಯಾನ್, ಶರದ್ ಎಸ್. ಕೋಟ್ಯಾನ್, ಪ್ರಸನ್ನ ಎಸ್.ಕೋಟ್ಯಾನ್, ಮುರಳೀಧರ ಬಿ.ಪೂಜಾರಿ, ಗಿರೀಶ ಬಿ.ಸುವರ್ಣ, ಆಶ್ರಿತ ಆದರ್ಶ್ ಕೊಟ್ಟಾರಿ, ಕ್ಲಾಸಿಕ್ ಹೋಟೆಲ್‌ನ ಶೈಲೆಶ್ ಗೌಡ, ಮೊದಲಾದವರು ಉಪಸ್ಥಿತರಿದ್ದರು. ಶ್ರೀ ದುರ್ಗಾಪರಮೇಶ್ವರಿ ಸಮಿತಿ ಅಧ್ಯಕ್ಷ ರಘುನಾಥ ಕೊಟ್ಟಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸೋಮಪ್ಪ.ಬಿ ಕೋಟ್ಯಾನ್, ಗೌ| ಕೋಶಾಧಿಕಾರಿ ಬಾಬು ಎಂ.ಸುವರ್ಣ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಭಕ್ತರನೇಕರು ಉಪಸ್ಥಿತರಿದ್ದು ವಿವಿಧ ಸೇವೆಗಳನ್ನು ನೆರವೇರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now