ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಯಶಸ್ವಿ ಜಿಲ್ಲಾ ಸಮಾವೇಶ

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಯಶಸ್ವಿ ಜಿಲ್ಲಾ ಸಮಾವೇಶ
0Shares

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಇದರ ದ.ಕ. ಜಿಲ್ಲಾ ಸಮಾವೇಶ ಮಂಗಳೂರು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ನಿವೃತ್ತ ಪ್ರಾಂಶುಪಾಲರು, ಜನಪದ ತಜ್ಞರೂ ಆದ ಡಾ. ಗಣನಾಥ ಎಕ್ಕಾರು ಸಮಾವೇಶವನ್ನು ಉದ್ಘಾಟಿಸಿದರು. SFI ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್, ದೆಹಲಿ ವಿ ವಿ ಯ ಮಾಜಿ ವಿದ್ಯಾರ್ಥಿ ನಾಯಕಿ ಶಾರಿಕಾ ಎಕ್ಕಾರು, ಸಂತೋಷ್ ಬಜಾಲ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹಲವು ವಿದ್ಯಾರ್ಥಿಗಳು ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.

ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ನರ್ಸಿಂಗ್, ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ, ಡೊನೇಷನ್ ಹಾವಳಿ, ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ, ಸರಕಾರಿ ಬಸ್ ವ್ಯವಸ್ಥೆಯ ಹೆಚ್ಚಳ ಸೇರಿದಂತೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ನಿರ್ಣಯಗಳನ್ನು ಸಮಾವೇಶ ಅಂಗೀಕರಿಸಿತು. ಜಿಲ್ಲೆಯ 70 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗಿಗಳಾಗಿದ್ದರು. ಅಂತಿಮವಾಗಿ ನೂತನ ಜಿಲ್ಲಾ ಸಮಿತಿಯನ್ನು ಸಮಾವೇಶ ಆಯ್ಕೆ ಮಾಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now