ಉಡುಪಿ : ಕಾಂಗ್ರೆಸ್ ಮುಖಂಡನ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾಮಣಿಯರ ಮಾರಾಮಾರಿ

ಉಡುಪಿ : ಕಾಂಗ್ರೆಸ್ ಮುಖಂಡನ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾಮಣಿಯರ ಮಾರಾಮಾರಿ
0Shares

ಉಡುಪಿ: ಕಾಂಗ್ರೆಸ್ ಮುಖಂಡನ ಉದ್ಯಮದ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್‌ನ ಸದಸ್ಯೆಯರ ಮಾರಾಮರಿಯಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಜಿಲ್ಲೆಯ ನಾಯಕರ ಬಗ್ಗೆ ದೂರವಾಣಿಯಲ್ಲಿ ನಿಂದಿಸಿದ ಆಡಿಯೋ ವಿಚಾರವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ಪ್ರಮುಖರಿಬ್ಬರು ಮತ್ತು ಗ್ರಾಮೀಣ ಕಾಂಗ್ರೆಸ್ ಮುಖಂಡೆಯ ನಡುವೆ ಆದ ಜಗಳದ ಬಗ್ಗೆ ಇಂದು ರಾಜಿ ಪಂಚಾಯಿತಿಗೆ ತನ್ನ ಕಚೇರಿಗೆ ಪ್ರಸಾದ್ ರಾಜ್ ಕಾಂಚನ್ ಸೋಮವಾರ ಬೆಳಿಗ್ಗೆ ಕರೆಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್‌ನ ಸುಪ್ರಿತಾ, ಅರ್ಚನಾ ಹಾಗೂ ಗ್ರಾಮೀಣ ಕಾಂಗ್ರೆಸ್‌ನ ವನಿತಾ ಫರ್ನಾಂಡೀಸ್ ನಡುವೆ ಆಡಿಯೋ ವಿಚಾರವಾಗಿ ಗಲಾಟೆ ಪ್ರಾರಂಭವಾಗಿತ್ತು. ಇದು ವಿಕೋಪಕ್ಕೆ ಮೂವರ ನಡುವೆ ಬಾರೀ ಮಾರಾಮಾರಿ ನಡೆಯಿತು ಎಂದು ತಿಳಿದುಬಂದಿದೆ. ಇದೆಲ್ಲವನ್ನೂ ನೋಡುತ್ತಿದ್ದ ಪ್ರಸಾದ್ ಕಾಂಚನ್ ಮೂವರ ಹೊಯಿಕೈ ತಡೆಯಲಾಗದೆ ಕಂಗಲಾಗಿದ್ದರು ಎನ್ನಲಾಗಿದೆ.

ವನಿತಾ ಫರ್ನಾಂಡೀಸ್ ಅವರು ಇಬ್ಬರು ಮಹಿಳಾ ಬ್ಲಾಕ್‌ನ ಸದಸ್ಯೆಯರಿಗೆ ಚೆನ್ನಾಗಿ ತದುಕಿದ ಪರಿಣಾಮವಾಗಿ ಸುಪ್ರಿತಾ ಅವರ ತಲೆ ಮತ್ತು ಮುಖಕ್ಕೆ ಗಾಯವಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟೇಲ್ಲ ನಡೆದ ಬಳಿಕ ಇನ್ನೇನು ಪೊಲೀಸ್ ಕೇಸ್ ದಾಖಲಾಗುತ್ತೆ ಎಂದು ತಿಳಿದ ಕಾಂಗ್ರೆಸ್ ಮುಖಂಡ ಗಾಯಗೊಂಡ ಸುಪ್ರಿತಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮತ್ತೆ ರಾಜಿಪಂಚಾಯಿತಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಶಿಸ್ತಿನಿಂದ ಪಕ್ಷಕ್ಕೆ ದುಡಿಯುತ್ತಿದ್ದಾರೆ. ಆದರೇ ಇತ್ತೀಚೆಗೆ ಬಂದ ಕೆಲವೊಂದು ಮಹಿಳಾ ಕಾರ್ಯಕರ್ತರು ಸ್ವ ಇಚ್ಛೆಯಿಂದ ವರ್ತಿಸುವ ಪರಿಣಾಮ ಇಂತಹ ಮಾರಾಮಾರಿ ನಡೆಯುತ್ತಿದೆ. ಇದಕ್ಕೆಲ್ಲ ಹಿರಿಯ ಮುಖಂಡರು ಕಡಿವಾಣ ಹಾಕಬೇಕು ಎಂದು ಹಿರಿಯ ಮಹಿಳಾ ಕಾಂಗ್ರೆಸ್‌ನ ಮುಖಂಡೆ ಹೇಳಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now