
ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ : ಅಧ್ಯಯನ ಪ್ರವಾಸ
ದಿನಾಂಕ 16/10/2024 ರಂದು ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಗಣಕ ಶಾಸ್ತ್ರ (BCA) ವಿಭಾಗದ ವತಿಯಿಂದ “Manipal Skill Development Centre” ನಲ್ಲಿ ಅಧ್ಯಯನ ಪ್ರವಾಸವನ್ನು (Study Visit) ಹಮ್ಮಿಕೊಳ್ಳಲಾಗಿತ್ತು. ಈ ಪ್ರವಾಸದಲ್ಲಿ ಸುಮಾರು ನೂರು ವಿದ್ಯಾರ್ಥಿಗಳು ಹಾಗೂ ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕರು ಭಾಗವಹಿಸಿದ್ದರು. ಈ ಅಧ್ಯಯನ ಪ್ರವಾಸದ ಉದ್ದೇಶ, ವಿದ್ಯಾರ್ಥಿಗಳಿಗೆ ತಾಂತ್ರಿಕ ಕಲಿಕೆ ಹಾಗೂ ನವೀಕೃತ ತಂತ್ರಜ್ಞಾನಗಳ ಪರಿಚಯ ನೀಡುವುದು ಮತ್ತು ಕೈಗಾರಿಕಾ ಪ್ರಕ್ರಿಯೆಗಳ practically ಅನುಭವವನ್ನು ನೀಡುವುದು ಆಗಿತ್ತು. Manipal Skill Development Centre ನಲ್ಲಿ ವಿದ್ಯಾರ್ಥಿಗಳು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ, ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಜ್ಞಾನವನ್ನು ಪಡೆದು ಕೊಂಡರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























