
ಕಲ್ಯಾಣಪುರ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಮಿಲಾಗ್ರಿಸ್ ಕನ್ನಡ ಮೀಡಿಯಂ ಹೈಸ್ಕೂಲ್ನಲ್ಲಿ ಇಂಟರಾಕ್ಟ್ ಪದಪ್ರಧಾನ, ಪುಸ್ತಕ ವಿತರಣೆ, ವನಮಹೋತ್ಸವ, ಶಾಲಾ ಸಮವಸ್ತ್ರ ವಿತರಣೆ ಹಾಗೂ ವಿದ್ಯಾರ್ಥಿ ವೇತನ ನೀಡುವ ಬಹುಮುಖಿ ಕಾರ್ಯಕ್ರಮವು ದಿನಾಂಕ 10-07-2026 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.

ಇಂಟರಾಕ್ಟ್ ನೂತನ ಪದಾಧಿಕಾರಿಗಳ ಪದಪ್ರಧಾನ:
ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷರಾದ ಗಿರಿಚಂದ್ರ ಆರ್., ಪಿಡಿಜಿ ರಾಜಾರಾಮ್ ಭಟ್, ಇಂಟರಾಕ್ಟ್ ಚೇರ್ಮನ್ ರಾಮಪೂಜಾರಿ ಮತ್ತು ದಾನಿ ದಿನೇಶ್ ಪೈ ಇವರು ಕಾರ್ಯಕ್ರಮವನ್ನು ಜಂಟಿಯಾಗಿ ನೆರವೇರಿಸಿದರು.
ನೂತನ ಅಧ್ಯಕ್ಷರು: ಕುಮಾರಿ ಗೌತಮಿ
ನೂತನ ಕಾರ್ಯದರ್ಶಿ: ಕುಮಾರಿ ಪೂರ್ವಿ
ಕಾರ್ಯಕ್ರಮದ ಮುಖ್ಯಾಂಶಗಳು:
ಸಮುದಾಯ ಸೇವೆ: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಶಾಲಾ ಸಮವಸ್ತ್ರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಪರಿಸರ ಕಾಳಜಿ: ಪರಿಸರ ಸಂರಕ್ಷಣೆಯ ಸಂದೇಶ ಸಾರಲು ವನಮಹೋತ್ಸವ ಪ್ರಯುಕ್ತ ಗಿಡಗಳನ್ನು ವಿತರಣೆ .
ಸವಿನೆನಪು: ಇಡೀ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ರೋಟರಿಯನ್ ಇಕ್ಬಾಲ್ ಹಮ್ಮಾಜಿ ಅವರು ತಮ್ಮ ಛಾಯಾಗ್ರಹಣದ ಮೂಲಕ ಸೆರೆಹಿಡಿದರು.
ಗಣ್ಯರ ಉಪಸ್ಥಿತಿ ಮತ್ತು ನಿರ್ವಹಣೆ:
ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅನಿತಾ ಡಿಸೋಜಾ ಅವರು ಉಪಸ್ಥಿತರಿದ್ದ ಗಣ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪೃಥ್ವಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ತ್ರಿಶಾನ್ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ರೋಟರಿ ಕ್ಲಬ್ನ ಕಾರ್ಯದರ್ಶಿ ಶಿಶಿರ ಶೆಟ್ಟಿ, ಸದಸ್ಯರಾದ ದಿವಾಕರ್ ಪಿ., ರಾಮಕೃಷ್ಣ ಆಚಾರ್, ಪ್ರಕಾಶ್, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now