ಚಿರಂತನ ಶಿಕ್ಷಣ ಸಂಸ್ಥೆಯಿಂದ ಸಂವಹನ ಕೌಶಲ್ಯ ಕುರಿತು ಕಾರ್ಯಾಗಾರ

ಚಿರಂತನ ಶಿಕ್ಷಣ ಸಂಸ್ಥೆಯಿಂದ ಸಂವಹನ ಕೌಶಲ್ಯ ಕುರಿತು ಕಾರ್ಯಾಗಾರ
0Shares

ಚಿರಂತನ ಶಿಕ್ಷಣ ಸಂಸ್ಥೆಗಳು, ಕೋಟೇಶ್ವರದ ಶಿಕ್ಷಕರ ತರಬೇತಿ ಹಾಗೂ ಆಪ್ತಸಮಾಲೋಚನಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಜುಲೈ 8, ಬುಧವಾರ “Mastering the Art of Communication” ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಾಗಾರದಲ್ಲಿ ಬೆಂಗಳೂರು Oracle Corporation ಸಂಸ್ಥೆಯ ಕ್ಲೌಡ್ ಕನ್ಸಲ್ಟೆಂಟ್ ಕೃತಿಕಾ ಪೊನ್ನಾಂಬಲಮ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪರಿಣಾಮಕಾರಿ ಸಂವಹನ ಕೌಶಲ್ಯದ ಮಹತ್ವ, ವೃತ್ತಿಜೀವನದಲ್ಲಿ ಅದರ ಅನ್ವಯಿಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ವಿವಿಧ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಚಿಂತನಾ ರಾಜೇಶ್, ಅಕಾಡೆಮಿಕ್ ಲೀಡ್ ಶ್ರೀಮತಿ ವಿಲ್ಮಾ ಡಿ’ಸಿಲ್ವಾ ಹಾಗೂ ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವೀಣಾ ,ಸುಶ್ಮಿತಾ, ವಿನಿತ ನಿರೂಪಿಸಿ, ಆಶಾ ಸ್ವಾಗತಿಸಿದರು. ಶಕೀಲಾ ಪರಿಚಯಿಸಿ ಅಪೇಕ್ಷಾ ವಂದನಾರ್ಪಣೆ ಮಾಡಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now