ಮೈಸೂರು ಕಂಬಳ ; ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕಂಬಳದ ಸ್ಥಳ ವೀಕ್ಷಣೆಗೆ ತೆರಳಿದ ಶಾಸಕ ಅಶೋಕ್‌ ರೈ..!!

ಮೈಸೂರು ಕಂಬಳ ; ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕಂಬಳದ ಸ್ಥಳ ವೀಕ್ಷಣೆಗೆ ತೆರಳಿದ ಶಾಸಕ ಅಶೋಕ್‌ ರೈ..!!
0Shares

ಪುತ್ತೂರು: ಈ ಬಾರಿಯ ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಬೇಕು ಮತ್ತು ಇದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಳೆದ ವಾರ ಬೆಂಗಳೂರು ಕಂಬಳದ ರುವಾರಿ ಪುತ್ತೂರು ಶಾಸಕ ಅಶೋಕ್‌ ರೈಗೆ ಸೂಚನೆ ನೀಡಿದ್ದು, ಅದರಂತೆ ಶಾಸಕ ಅಶೋಕು ರೈ ಯವರು ಶುಕ್ರವಾರ ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಂಬಳ ನಡೆಸುವ ಮೂಲಕ ತುಳುನಾಡಿನ ಜನಪದ ಕ್ರೀಡೆಯನ್ನು ಕನ್ನಡಿಗರಿಗೆ ವೀಕ್ಷಣೆಗೆ ಅವಕಾಶ ಮಾಡುವುದರ ಜೊತೆ ವಿಶ್ವದೆಲ್ಲಡೆ ಕಂಬಳವನ್ನು ಪರಿಚಯಿಸುವ ಕೆಲಸವನ್ನು ಶಾಸಕ ಅಶೋಕ್ ರೈ ಅವರು ಮಾಡಿದ್ದರು. ಬೆಂಗಳೂರು ಕಂಬಳ ನಡೆದ ಮಾರನೇ ವರ್ಷ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾ‌ರ್ ಚರ್ಚೆ ನಡೆಸಿದ್ದರು. ಇದೀಗ ಕಂಬಳ ಪ್ರೇಮಿ ಡಿ ಕೆ ಶಿವಕುಮಾರ್‌ರವರೇ ಮುಖ್ಯಮಂತ್ರಿಯಾಗಿದ್ದು ಮತ್ತೆ ಮೈಸೂರಿನಲ್ಲಿ ಕಂಬಳ ನಡೆಸುವಂತೆ ಅಶೋಕ್ ರೈ ಅವರಿಗೆ ಸೂಚನೆ ನೀಡಿದ್ದು ಮಾತ್ರವಲ್ಲದೆ ಕಂಬಳ ನಡೆಸುವುದಾದರೆ ಸರಕಾರವೇ ನಿಮ್ಮ ಜೊತೆಗಿರಲಿದೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now