ಲಯನ್ಸ್ ಜಿಲ್ಲೆ 317ಸಿ : ಪ್ರಾಂತ್ಯ 3ರ ಅಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆ

ಲಯನ್ಸ್ ಜಿಲ್ಲೆ 317ಸಿ : ಪ್ರಾಂತ್ಯ 3ರ ಅಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆ
0Shares

ಉಡುಪಿ : ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲೂಯಿಸ್ ಲೋಬೊ ಇದೀಗ ಲಯನ್ಸ್ ಜಿಲ್ಲೆ 317ಸಿ ಇದರ ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ಇವರು, ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಫ್ಕಾ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಇವರು, ಉಡುಪಿ ಜಿಲ್ಲೆಯ ಕ್ರೈಸ್ತ ಉದ್ಯಮಿಗಳ ಸಂಘಟನೆಯ ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಪುಣ್ಯ ಕ್ಷೇತ್ರದ ಉಪಾಧ್ಯಕ್ಷ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ರಾಜ್ಯದ ಪ್ರಥಮ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಕ್ಯಾಬಿನೆಟ್ ನಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು ಕಳೆದ ವರ್ಷ ವಲಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಲಯನ್ಸ್ ಲೂಯಿಸ್ ಲೋಬೋ ರವರನ್ನು ಪ್ರಾಂತ್ಯ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಲಯನ್ಸ್ ಕ್ಲಬ್ ಉಡುಪಿ, ಮಿಡ್ ಟೌನ್, ಸುಭಾಸ್ ನಗರ, ಸಂತೆಕಟ್ಟೆ, ಪ್ರಕೃತಿ, ಪರ್ಕಳ, ಕಲ್ಯಾಣ್ಪುರ ಸ್ವರ್ಣ, ಉದ್ಯಾವರ, ಮೂಡುಬೆಳ್ಳೆ, ಬಂಟಕಲ್ ಬಿ ಸಿ ರೋಡ್ ಪ್ರಾಂತ್ಯ ಮೂರರ ವ್ಯಾಪ್ತಿಗೆ ಬರಲಿವೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now