ಬಂಟ್ವಾಳ: ಬಿಯರ್ ಬಾಟಲೆಯಿಂದ ಇರಿದು ಚಿಕ್ಕಪ್ಪನನ್ನೇ ಕೊಲೆಗೈದ ಯುವಕ

ಬಂಟ್ವಾಳ: ಬಿಯರ್ ಬಾಟಲೆಯಿಂದ ಇರಿದು ಚಿಕ್ಕಪ್ಪನನ್ನೇ ಕೊಲೆಗೈದ ಯುವಕ
0Shares

ಪುಂಜಾಲಕಟ್ಟೆ : ಯುವಕನೋರ್ವ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಸಂಭವಿಸಿದೆ.

ಇಲ್ಲಿನ ನಿವಾಸಿ ಮಧುಸೂಧನ (38) ಅವರು ಮೃತಪಟ್ಟವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಕೊಲೆಗೈದವನಾಗಿದ್ದಾನೆ.

ಘಟನೆಯ ವಿವರ: ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯಿಂದ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು.ಇದನ್ನು ಆಕ್ಷೇಪಿಸಿದ ಮಧುಸೂದನ್ ಅವರನ್ನು ರಾಹುಲ್ ಕೋಪದಿಂದ ಬಿಯ‌ರ್ ಬಾಟಲ್ ನಿಂದ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now