ಎಸ್. ಎಫ್. ಎಕ್ಸ್. ಟ್ರೋಫಿ 2026 : ಹೋಲಿ ರೋಜರಿ ಕುಂದಾಪುರ ಪ್ರಥಮ

ಎಸ್. ಎಫ್. ಎಕ್ಸ್. ಟ್ರೋಫಿ 2026 : ಹೋಲಿ ರೋಜರಿ ಕುಂದಾಪುರ ಪ್ರಥಮ

0Shares

ಉದ್ಯಾವರ : ಎಸ್.ಎಫ್.ಎಕ್ಸ್. ಕ್ರಿಕೆಟರ್ಸ್ ಉದ್ಯಾವರದ ನೇತೃತ್ವದಲ್ಲಿ ಕ್ರೈಸ್ತ ಸಮಾಜ ಬಾಂಧವರಿಗಾಗಿ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಹೋಲಿ ರೋಸರಿ ಕುಂದಾಪುರ ತಂಡವು ಪ್ರಥಮ ಸ್ಥಾನ ಗಳಿಸಿದ್ದು, ತಲ್ಲೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಗೊಂಡಿತು.

ಅವಿಭಾಜಿತ ಜಿಲ್ಲೆಯ 18 ತಂಡಗಳು ಭಾಗವಹಿಸಿದ್ದ 40 ಗಜಗಳ ಕ್ರಿಕೆಟ್ ಪಂದ್ಯಕೂಟವು ಉದ್ಯಾವರದ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು. ಸೆಮಿ ಫೈನಲ್ ಪಂದ್ಯಾಟದಲ್ಲಿ ತಲ್ಲೂರು ತಂಡವು ಬಸ್ರೂರು ತಂಡವನ್ನು, ಕುಂದಾಪುರ ತಂಡವು ಶಂಕರಪುರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶವನ್ನು ಮಾಡಿತ್ತು. ಪ್ರತಿ ಪಂದ್ಯದ ಪಂದ್ಯ ಶ್ರೇಷ್ಠ ಆಟಗಾರನಿಗೆ 5 ಕೆ.ಜಿ ಅಕ್ಕಿ ಪಂದ್ಯಾಟದ ವಿಶೇಷ ಆಕರ್ಷಣೆಯಾಗಿತ್ತು. ಪಂದ್ಯಕೂಟದ ಸರಣಿ ಶ್ರೇಷ್ಠ ಆಟಗಾರನಾಗಿ ಕುಂದಾಪುರ ತಂಡದ ನೋಲನ್ 25ಕೆಜಿ ಅಕ್ಕಿ ಪಡೆದರೆ, ಉತ್ತಮ ದಾಂಡಿಗ ಕುಂದಾಪುರ ತಂಡದ ರೋಯಲ್, ಉತ್ತಮ ಎಸೆತಗಾರ ಪ್ರಶಸ್ತಿ ತಲ್ಲೂರು ತಂಡದ ವಿನ್ ಸ್ಟನ್ ಮತ್ತು ಶ್ರೇಷ್ಠ ಕ್ಷೇತ್ರ ರಕ್ಷಕ ಪ್ರಶಸ್ತಿ ತಲ್ಲೂರು ತಂಡದ ಜೀವನ್ ಪಾಲಾಯಿತು. ವೈಯುಕ್ತಿಕ ಪ್ರಶಸ್ತಿ ವಿಜೇತರು ತಲಾ 10 ಕೆಜಿ ಅಕ್ಕಿಯನ್ನು ಪಡೆದುಕೊಂಡರು. ಪ್ರಥಮ ಸ್ಥಾನಿ ಕುಂದಾಪುರ ತಂಡವು ಟ್ರೋಫಿ ಮತ್ತು 25 ಸಾವಿರ ನಗದು ಪಡೆದುಕೊಂಡರೆ, ರನ್ನರ್ಸ್ ಆಪ್ ತಂಡ ತಲ್ಲೂರು 15 ಸಾವಿರ ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಭೂ ನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫೆರ್ನಾಂಡಿಸ್, ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಸೊಸೈಟಿ ಸ್ಥಾಪಕ ಜೀವನ್ ಡಿಸೋಜಾ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉದ್ಯಮಿ ಪ್ರೇಮ್ ಮಿನೇಜಸ್, ಐಸಿವೈಎಂ ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಐವನ್ ಡಿಸಿಲ್ವಾ ಉಪಸ್ಥಿತರಿದ್ದರು. ರಾಜ್ಯಮಟ್ಟದ ವೀಕ್ಷಣಾ ವಿವರಣೆಕಾರ ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now