ಸಮಸ್ಯೆಗಳೆಂಬುದಿಲ್ಲ, ಇರುವು ದೆಲ್ಲಾ ಸವಾಲುಗಳು ಮಾತ್ರ – ಸಾಹಿತಿ ನೇಮಿಚಂದ್ರ

ಸಮಸ್ಯೆಗಳೆಂಬುದಿಲ್ಲ, ಇರುವು ದೆಲ್ಲಾ ಸವಾಲುಗಳು ಮಾತ್ರ – ಸಾಹಿತಿ ನೇಮಿಚಂದ್ರ

0Shares

ಮುಂಬಯಿ,: ಶಿಕ್ಷಣದಲ್ಲಿ ಅಂಕಗಳು ಬಂದಿಲ್ಲ ಅನ್ನುವ ಕಾರಣಕ್ಕಾಗಿ ಪ್ರಸಕ್ತ ಮಕ್ಕಳು ಆತ್ಮಹತ್ಯೆ ಮಾಡುವುದು ಘೋರ ದುರಂತವಾಗಿದೆ. ಭವಿಷ್ಯದ ಪ್ರಜೆಗಳಿಗೆ ಅಂಕಗಳಷ್ಟೇ ಮುಖ್ಯವೇ…? ಇಂದಿನ ಮಕ್ಕಳನ್ನು ರೇಸಿನ ಕುದುರೆಗಳಾಗಿ ಬೆಳೆಸುವುದು ದೊಡ್ಡ ಆತಂಕವಾಗಿದೆ. ಮನುಜರಲ್ಲಿ ಸಮಸ್ಯೆಗಳೆಂಬುದಿಲ್ಲ, ಇರುವುದೆಲ್ಲಾ ಸವಾಲುಗಳು ಮಾತ್ರ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿಯೊಂದು ಸವಾಲುಗಳಿಗೆ ಉತ್ತರ ಹುಡುಕಿಕೊಳ್ಳುವಷ್ಟು ಬುದ್ಧಿವಂತರು ನಾವಾಗಬೇಕು. ಆ ಮೂಲಕ ಬದುಕು ನಮಗೆ ಹೊಸ ಜೀವನವನ್ನು ಕಲಿಸುವುದು ಎಂದು ಹಿರಿಯ ಸಾಹಿತಿ, ವೈಶಿಷ್ಟ ್ಯಪೂರ್ಣ ಬರಹಗಾರ್ತಿ ನೇಮಿಚಂದ್ರ ಮಲ್ಹೋತ್ರ ತಿಳಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗದೊಂದಿಗೆ ಕನ್ನಡ ಲೇಖಕಿಯರ ಬಳಗ ಮುಂಬಯಿ ಸೃಜನಾ’ ಇಂದಿಲ್ಲಿ ಸಂಜೆ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ವಿಜ್ಞಾನ, ಮಹಿಳಾ ಸಂವೇದನೆ, ಪ್ರವಾಸ ಕಥನ,ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಬದುಕು ಬದಲಿಸುವಂತಹ ಸಕಾರಾತ್ಮಕ ಅಂಕಣಕರ್ತೆ, ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ನೇಮಿಚಂದ್ರ ಅವರುಸೃಜನಾ’ ಸದಸ್ಯರೊಂದಿಗೆ ಸಾಹಿತ್ಯಕ ವಿಚಾರ, ವಿಷಯಗಳನ್ನು ಹಂಚಿಕೊಂಡÀು ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನಿತ್ತರು.

`ಸೃಜನಾ’ ಸಂಚಾಲಕಿ ಪದ್ಮಜಾ ಮಣ್ಣೂರ್, ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಕೋಶಾಧಿಕಾರಿ ಡಾ| ದಾಕ್ಷಾಯಣಿ ಯಡಹಳ್ಳಿ, ಹಿರಿಯ ಸದಸ್ಯೆ ಶ್ಯಾಮಲಾ ಮಾಧವ್ ವೇದಿಕೆಯಲ್ಲಿದ್ದು, ಸಂವಾದದಲ್ಲಿ ಪತ್ರಕರ್ತೆ ಸಿ.ಜಿ ಮಂಜುಳಾ ಪಾಲ್ಗೊಂಡು ಸಾಹಿತ್ಯ ಕ್ಷೇತ್ರದ ತನ್ನ ಅನುಭವಗಳನ್ನು ಹಂಚಿಕೊಂಡರು.

ಸೃಜನಾ ಮಾಜಿ ಸಂಚಾಲಕಿ ಶಾರದಾ ಅಂಬೇಸಂಗೆ ಮತ್ತಿತರರು ಉಪಸ್ಥಿತರಿದ್ದು ಲಲಿತಾ ಅಂಗಡಿ ಪ್ರಭು ಪ್ರಾರ್ಥನೆಯನ್ನಾಡಿದರು. ಹಿರಿಯ ಸದಸ್ಯೆ ಸುಮಾ ದ್ವಾರಕನಾಥ್ ಮತ್ತು ಸಹ ಸಂಚಾಲಕಿ ಡಾ| ಜಿ.ಪಿ ಕುಸುಮ ಅತಿಥಿüಗಳನ್ನು ಪರಿಚಯಿಸಿದರು. ಲತಾ ಸಂತೋಷ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.
ಚಿತ್ರ / ವರದಿ : ರೋನ್ಸ್ ಬಂಟ್ವಾಳ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now