ಪಡುಬಿದ್ರಿಯಲ್ಲಿ ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ, 4.25 ಲಕ್ಷ ಮೌಲ್ಯದ ದನ, ವಾಹನ ವಶ

ಪಡುಬಿದ್ರಿಯಲ್ಲಿ ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ, 4.25 ಲಕ್ಷ ಮೌಲ್ಯದ ದನ, ವಾಹನ ವಶ

0Shares

ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ: 63/2026 ಕಲಂ: 11 (1) (ಎ), 11(1) (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960, ಕಲಂ 4,5,7 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020, ಕಲಂ 112, 303 (2)ಜೊತೆಗೆ 3(5) ಬಿ.ಎನ್ ಎಸ್ ಮತ್ತು ಕಲಂ 66 ಜೊತೆಗೆ 192(ಎ) ಐಎಂವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 18-05-2026 ರಂದು ಬೆಳಿಗ್ಗೆ ಸುಮಾರು 6:40 ಗಂಟೆಗೆ ಪಡುಬಿದ್ರಿ ಪೊಲೀಸ್‌ ಠಾಣಾ ಸರಹದ್ದಿನ ಇನ್ನಾ ಗ್ರಾಮದ ಕಜನಡ್ಕ ಎಂಬಲ್ಲಿ ಅನಿಲ್ ಕುಮಾರ್ ಟಿ ನಾಯ್ಕ್ ಪಿಎಸ್ಐ(ತನಿಖೆ) ರವರಿಗೆ ಬಂದ ಮಾಹಿತಿಯಂತೆ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ KA19A6151 ನೇ 407 TURBO ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ 3 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವುದು ಕಂಡು ಬಂದಿದ್ದು ಚಾಲಕ ಪಡುಬಿದ್ರಿ ಅಬ್ಬಾಸ್‌ಗುಡ್ಡೆಯ ಇಸ್ಮಾಯಿಲ್ ಹಾಗೂ ಕರ್ನಿರೆ ಮಹಮ್ಮದ್ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು, ದಸ್ತಗಿರಿ ಮಾಡಲಾದ ಆರೋಪಿ1)
ಇಸ್ಮಾಯಿಲ್ ಪ್ರಾಯ 42 ವರ್ಷ ತಂದೆ: ಪಿ ಸುಲೆಮಾನ್ ವಾಸ: ಅಬ್ಬಾಸ್ ಗುಡ್ಡೆ ಅಲಂಗಾರ ರೋಡ್ ನಡ್ಸಾಲು ಗ್ರಾಮ ಕಾಪು ತಾಲೂಕು ಮತ್ತು 2)
ಕರ್ನಿರೆ ಮಹಮ್ಮದ್ ಪ್ರಾಯ 62 ವರ್ಷ ತಂದೆ: ಉನ್ನಿ ಚಾಯಬ್ಬ ವಾಸ: 5 ಸೆಂಟ್ಸ್ ಕರ್ನಿರೆ ಮಸೀದಿ ಬಳಿ ಕರ್ನಿರೆ ಗ್ರಾಮ, ಮೂಲ್ಕಿ ತಾಲೂಕು ಇವರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಆರೋಪಿ ಇಸ್ಮಾಯಿಲ್ ಈತನ ವಿರುದ್ದ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ 1, ಮುಲ್ಕಿ ಠಾಣೆಯಲ್ಲಿ 3, ಬಂಟ್ವಾಳ ನಗರ ಠಾಣೆಯಲ್ಲಿ 1, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1, ಕಾರ್ಕಳ ನಗರ ಠಾಣೆಯಲ್ಲಿ 1, ಹೆಬ್ರಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ವಶಪಡಿಸಿಕೊಂಡ ವಾಹನದ ಹಾಗೂ ಕಳವು ಮಾಡಿದ ದನಗಳ ಒಟ್ಟು ಅಂದಾಜು ಮೌಲ್ಯ 4,25,000/- ಆಗಿರುತ್ತದೆ.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಪಿ ಎಸ್ ಐ ತನಿಖೆ ಅನಿಲ್ ಕುಮಾರ್ ರವರೊಂದಿಗೆ ಠಾಣಾ ಸಿಬ್ಬಂಧಿಯವರಾದ ಎ ಎಸ್ ಐ ದಿನಕರ, ಹೆಚ್ ಸಿ ನವೀನ್ ಕುಮಾರ್, ಹೆಚ್ ಸಿ ಅಶ್ವಿನ್ ಕುಮಾರ್, ಹೆಚ್ ಸಿ ಕೃಷ್ಣ ಪ್ರಸಾದ್, ಪಿಸಿ ಸಂದೇಶ್, ಪಿಸಿ ಪ್ರಭು ಅಥಣಿ, ಪಿಸಿ ರಾಘವೇಂದ್ರ, ಪಿಸಿ ಅಣ್ಣಪ್ಪ , ಪಿಸಿ ಶ್ರೀಧರ್ ರವರು ಭಾಗವಹಿಸಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now