
ಬ್ರಹ್ಮಾವರ, 8 ಅಕ್ಟೋಬರ್ 2024: ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜು ಮತ್ತು ಉಡುಪಿಯ ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ ಸಹಯೋಗದಲ್ಲಿ ಆಪ್ತ ಸಮಾಲೋಚನಾ ಕೇಂದ್ರವನ್ನು ಕಾಲೇಜಿನಲ್ಲಿ 8 ಅಕ್ಟೋಬರ್ 2024ರಂದು ಉದ್ಘಾಟಿಸಲಾಯಿತು.
ಉಡುಪಿಯ ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ, ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಯುವ ಜನತೆ ಯಲ್ಲಿ ಹೆಚ್ಚುತ್ತಿರುವ ಖಿನ್ನತೆ , ಆತ್ಮಹತ್ಯೆ ಸಮಸ್ಯೆಯನ್ನು ಬಗ್ಗೆ ಅರಿವು ಮೂಡಿಸಿ , ಸಮಾಲೋಚನಾ ಕೇಂದ್ರವು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದಲ್ಲಿ ನೆರವಾಗುದರ ಜೊತೆಗೆ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೆಂಬಲ ನೀಡುವ ಕಾರ್ಯವನ್ನು ಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಕೆ. ನಾರಾಯಣನ್, ನಿವೃತ್ತ ಪ್ರಾಂಶುಪಾಲರು, ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರ, ದೀಪಶ್ರೀ, ಆಪ್ತ ಸಮಲೋಚಕರು , ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ, ಉಡುಪಿ
ಶ್ರೀ ರಾಜಾರಾಂ ಶೆಟ್ಟಿ, ಅಧ್ಯಕ್ಷರು, ರೆಡ್ ಕ್ರಾಸ್ ಘಟಕ, ಬ್ರಹ್ಮಾವರ
-ಶ್ರೀ ಸುಂದರ್ ಪೂಜಾರಿ, ಅಧ್ಯಕ್ಷರು, ಜೈಂಟ್ಸ್ ಗ್ರೂಪ್, ಬ್ರಹ್ಮಾವರ ಉಪಸ್ಥಿತರಿದ್ದರು
ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಜೆ,ಶ್ರೀ ಪ್ರಸನ್ನ ಶೆಟ್ಟಿ ಉಪಸ್ತಿತರಿದರು .


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























