ಎಸ್‌ಎಂಎಸ್‌ ಕಾಲೇಜು, ಬ್ರಹ್ಮಾವರದಲ್ಲಿ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ

ಎಸ್‌ಎಂಎಸ್‌ ಕಾಲೇಜು, ಬ್ರಹ್ಮಾವರದಲ್ಲಿ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ

0Shares

ಬ್ರಹ್ಮಾವರ: ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಅಂಗವಾಗಿ ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜಿನಲ್ಲಿ ಅಕ್ಟೋಬರ್ 7, ೨೦೨೪ ರಂದು ಪಕ್ಷಿಗಳ ಅಂಚೆಚೀಟಿ ಪ್ರದರ್ಶನವನ್ನು ಆಯೋಜಿಸಲಾಯಿತು . ಕಾಲೇಜಿನ ನಿವೃತ್ತ ಕಚೇರಿ ಅಧೀಕ್ಷಕ ,ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆಗೈದ ಶ್ರೀ ಡೇನಿಯಲ್ ಮೊಂತೆರೋ ತಮ್ಮ ವಿಶಿಷ್ಟ ಅಪರೂಪದ ಪಕ್ಷಿಗಳ ಸ್ಟಾಂಪ್ ಸಂಗ್ರಹಣೆ ಪ್ರದಶಿಸಿದರು. ಕಾರ್ಯಕ್ರಮದಲ್ಲಿ ಶ್ರೀಯುತರು ಅವನತಿ ಅಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆ ಯಲ್ಲಿ ನಮ್ಮ ಪಾತ್ರವನ್ನು ಜವಾಬ್ದಾರಿಯನ್ನು ಹಾಗು ಹವ್ಯಾಸದಿಂದ ಹೇಗೆ ಸಾಧನೆ ಮೆಟ್ಟಿಲನೇರಬಹುದೆಂದು ತಿಳಿ ಹೇಳಿದರು .ಇದು ಅವರ 230 ನೇ ಪಕ್ಷಿಗಳ ಅಂಚೆಚೀಟಿ ಪ್ರದರ್ಶನವಾಗಿದು, ಪ್ರದರ್ಶನವು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ ೩:೩೦ ರವರೆಗೆ ನಡೆಯಿತು.

ಈ ಕಾಯ್ರಕ್ರಮದಲ್ಲಿ ಅತಿಥಿಯಾಗಿ ಕಾಲೇಜಿನ ಹಳೆ ವಿಧ್ಯಾರ್ಥಿ ವಿರಾಜ್ ಶೆಟ್ (ಅಧ್ಯಕ್ಷ, JCI ಶಂಕರನಾರಾಯಣ 2024)
ದಕ್ಷಿಣ ಕನ್ನಡ ಅಂಚೆ ಚೀಟಿ ಸಂಗ್ರಹಕಾರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಪ್ರಭು , IQAC ಸಂಯೋಜಕರಾದ ಅಶ್ವಿನ್ ಶೆಟ್ಟಿ ಎ ,ಪ್ರಾಂಶುಪಾಲರಾದ
ಡಾ .ರಾಬರ್ಟ್ ರಾಡ್ರಿಗೆಸ್ ,ಕಾಲೇಜಿನ ವಿದ್ಯಾರ್ಥಿಗಳು ,ಸಿಬಂಧಿ ಗಳು ಉಪಸ್ತಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now