ಕಾರ್ಕಳ – ಶಿರ್ವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಜೂಜಾಟ ಜಾಲದ ಐವರು ಆರೋಪಿಗಳ ಬಂಧನ

ಕಾರ್ಕಳ – ಶಿರ್ವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಜೂಜಾಟ ಜಾಲದ ಐವರು ಆರೋಪಿಗಳ ಬಂಧನ

0Shares

ಕಾರ್ಕಳ : ದಿನಾಂಕ 27.03.2026 ರಂದು ಮದ್ಯಾಹ್ನ ಸಮಯ ಸುಮಾರು 14.30 ಗಂಟೆಗೆ ಪಿರ್ಯಾದಿ ಪ್ರಸನ್ನ ಎಂ ಎಸ್, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ಮತ್ತು ಸಿಬ್ಬಂದಿಯವರು ಕಾರ್ಕಳ ತಾಲೂಕು ಕಸಬಾ ಗ್ರಾಮದ ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ KA15Z0007ನೇ ನಂಬ್ರದ ಕಪ್ಪು ಬಣ್ಣದ ಫಾರ್ಚುನರ್ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ, ಸದ್ರಿ ಕಾರಿನಲ್ಲಿದ್ದ ಆಪಾದಿತರಾದ ಸುದರ್ಶನ್, ಕರ್ತವ್ಯ ಶೆಟ್ಟಿ, ಅರುಣ್ ಶ್ರೀಕಾಂತ್ ಮತ್ತು ಶಶಿಕಾಂತ್ ಎಂಬವರು ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರನ್ನು ಕೊಲ್ಲುವ ಉದ್ದೇಶದಿಂದ ಅವರ ಮೇಲೆ ಕಾರನ್ನು ಹತ್ತಿಸಲು ಪ್ರಯತ್ನಿಸಿ ಕೊಲೆ ಮಾಡಲು ಯತ್ನಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 46/2026 ಕಲಂ. 109, 132, ಜೊತೆಗೆ 3(5) BNSರಂತೆ ಪ್ರಕರಣ ದಾಖಲಾಗಿರುತ್ತದೆ.

ಶಿರ್ವ : ದಿನಾಂಕ:27.03.2026 ರಂದು ಮದ್ಯಾಹ್ನ 3.10 ಗಂಟೆಗೆ ಶಿರ್ವಾ ಗ್ರಾಮದ ಪದವು ಬಳಿ ಪಿರ್ಯಾದಿ ಮಂಜುನಾಥ ಮರಬದ, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್ ಠಾಣೆ ಇವರು ಕರ್ತವ್ಯದಲ್ಲಿರುವಾಗ ಬೆಳ್ಮಣ್ ನಿಂದ ಶಿರ್ವಾ ಕಡೆಗೆ ಅನುಮಾನಸ್ಪದವಾಗಿ ಬರುತ್ತಿರುವ KA15Z0007ನೇ ಕಪ್ಪು ಬಣ್ಣದ ಫಾರ್ಚುನರ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು, ಆಗ KA15Z0007 ಕಾರಿನ ಚಾಲಕ ವೇಗವಾಗಿ ಬಂದು ಒಮ್ಮೆಲೆ ಕಾರಿನ ವೇಗವನ್ನು ನಿಧಾನ ಮಾಡಿ ಕಿಟಕಿಯಿಂದ ಪಿರ್ಯಾದಿದಾರರನ್ನು ದೂಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪರಾರಿಯಾಗಿದ್ದು ಅದೇ ಸಮಯ ಶಿರ್ವ ಪೇಟೆಯಲ್ಲಿದ್ದ ಹೆಚ್ ಸಿ ರವರು ಕಾರನ್ನು ತಡೆದು ನಿಲ್ಲಿಸಿ, ಅವರ ಹೆಸರು ವಿಳಾಸ ವಿಚಾರಿಸಿದಾಗ ಸುದರ್ಶನ್, ಕರ್ತವ್ಯ ಶೆಟ್ಟಿ ಮತ್ತು ಅರುಣ್ ಎಂದು ತಿಳಿಸಿರುತ್ತಾರೆ. ಅಲ್ಲದೇ ಶ್ರೀಕಾಂತ್, ಶಶಿಕಾಂತ್ ಹೆಬ್ರಿಯ ತೇಜಸ್, ಬೈಂದೂರಿನ ಪ್ರಜ್ವಲ್ ಎಂಬವರೊಂದಿಗೆ ಸಂಘಟಿತರಾಗಿ ಸೇರಿ ಹಣ ಮಾಡುವ ಉದ್ದೇಶದಿಂದ ಕ್ರಿಕೆಟ್ ಬೆಟ್ಟಿಂಗ್ ಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿ, ವಂಚಿಸಿ ಜನರಿಂದ ಹಣ ಪಡೆದು ಜೂಜಾಟ ನಡೆಸುವವರಾಗಿದ್ದು, ಇದೇ ಉದ್ದೇಶದಿಂದ ಆರೋಪಿತರು ಪಿರ್ಯಾದಿದಾರರು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ ಪಿರ್ಯಾದಿದಾರರನ್ನು ದೂಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿರುತ್ತಾರೆ. ಆರೋಪಿತರು ಸರ್ಕಾರಿ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರ ಕರ್ತವ್ಯ ನಿರ್ವಹಣೆ ಮಾಡುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರಿಂದ ಆರೋಪಿತರ ಮೇಲೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 34/2026 ಕಲಂ: 132, 318(2),112(1) ಜೊತೆಗೆ 3(5) ಬಿಎನ್ ಎಸ್ ಕಲಂ: 78(3) ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಶಿರ್ವ ಠಾಣೆಯ PSI ಮಂಜುನಾಥ ಮರಬದ ASI ಸುದೇಶ್ ಶೆಟ್ಟಿ, HC ಮಂಜುನಾಥ ಅಡಿಗ ಹಾಗೂ ಪ್ರಕಾಶ್ ಸುವರ್ಣ ಕರ್ತವ್ಯ ನಿರ್ವಹಿಸುತ್ತಿದ್ದರು

ಸದರಿ ಎರಡೂ ಪ್ರಕರಣಗಳಲ್ಲಿ ಆರೋಪಿಗಳಾದ 1) ಸುದರ್ಶನ್ ಶೆಟ್ಟಿ(29), ತಂದೆ : ದಿ. ರಾಜೀವ ಶೆಟ್ಟಿ, ನಾಡ ಗ್ರಾಮ, ಕುಂದಾಪುರ, 2) ಕರ್ತವ್ಯ ಶೆಟ್ಟಿ(27), ತಂದೆ : ಸದಾನಂದ ಶೆಟ್ಟಿ, ಹೇರೂರು ಗ್ರಾಮ, ಕುಂದಾಪುರ, 3) ಅರುಣ್ ಶೆಟ್ಟಿ(29), ತಂದೆ : ದಿ. ಯಲ್ಲಪ್ಪ ಶೆಟ್ಟಿ, ಮೂದುರು ಗ್ರಾಮ, ಬೈಂದೂರು ತಾ. 4) ತೇಜಸ್(28), ತಂದೆ : ಮೋಹನ್ದಾಸ್ ಶೆಟ್ಟಿ, ಬೆಳಂಜೆ ಗ್ರಾಮ, ಹೆಬ್ರಿ ಮತ್ತು 5) ಪ್ರಜ್ವಲ್ ಶೆಟ್ಟಿ(29), ತಂದೆ : ಕುಶಾಲ್ ಶೆಟ್ಟಿ, ಶೀರೂರು ಗ್ರಾಮ, ಬೈಂದೂರು ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now