
ಪತ್ರಿಕಾ ಪ್ರಕಟಣೆ
ದಿನಾಂಕ 26.03.2026 ರಂದು ಸುಮಾರು ರಾತ್ರಿ 08:00 ಗಂಟೆಯ ಹೊತ್ತಿಗೆ ಮುಟ್ಲುಪಾಡಿ ಅಂಡಾರು ಗ್ರಾಮ ಹೆಬ್ರಿ ತಾಲೂಕು ಸುದರ್ಶನ ಶೆಟ್ಟಿ ಯವರ ತೊಟದಲ್ಲಿದ್ದ ಕೋಳಿಗಳನ್ನು ಗೂಡಿಗೆ ಹಾಕುತ್ತಿದ್ದ ಸಮಯ ಒಂದು ಆಲ್ಟೋ ಹಾಗೂ ಬಿಳಿ ಬಣ್ಣದ ಕಾರು ಮತ್ತು 4 ಬೈಕ್ ಗಳಲ್ಲಿ ಹರೀಶ, ಸುದೀರ, ದುರ್ಗಾ, ಗುರುದೀಶ, ಮತ್ತು ಪ್ರತಾಪ ಒಟ್ಟು ಸುಮಾರು 15 ಜನ ಬಂದು ಸುದರ್ಶನ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದರು, ಆ ಸಮಯ ಫಿರ್ಯಾದಿ ಪದ್ಮ ಇವರು ಹಾಗೂ ಆಕಾಶ ಎಂಬುವರು ಬಿಡಿಸಲು ಹೋದಾಗ ಹರೀಶನು ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ದುಡಿದಾಗ ಉಳಿದವರು ಬಂದು ಬೆನ್ನಿಗೆ ಕೈಯಿಂದ ಹೊಡೆದಿರುತ್ತಾರೆ. ನಂತರ ಆಕಾಶಗು ಹಲ್ಲೆ ಮಾಡಿರುತ್ತಾರೆ. ನಂತರ ಫಿರ್ಯಾದಿದಾರರು ಹಾಗೂ ಸುದರ್ಶನ ಶೆಟ್ಟಿ ಸುಧೀರರವರ ಕಾರಿನಲ್ಲಿ ಹೆಬ್ರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಈ ಕೃತ್ಯಕ್ಕೆ ಹರೀಶನು ಸುದರ್ಶನರವರಿಗೆ ಕೋಳಿಯ ಹಣ ಕೋಡಲು ಬಾಕಿಯಿರುವುದು ಕಾರಣವಾಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2026 ಕಲಂ: 115(2),189(2), 191(2), 190, 352, BNS and ಕಲಂ 3(1)(r)(s), 3(2)(va) The SC & ST (Prevention of Atrocities) Amendment Act 2015ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಸೂಚನೆಯಂತೆ ಅಜೆಕಾರು ಪೊಲೀಸ್ ಠಾಣಾ ಪಿಎಸ್‌ಐ ರವರು ಸಿಬ್ಬಂದಿಯರೊಂದಿಗೆ ಆರೋಪಿತರಾದೆ ಕಾರ್ಯ ಪ್ರವೃತ್ತರಾಗಿ ಆರೋಪಿಗಳಾದ 1) ಪ್ರತಾಪ್ ಪೂಜಾರಿ (32) ತಂದೆ: ರಾಮ ಪೂಜಾರಿ ವಾಸ: ರೇವತಿ ನಿಲಯ ಶೆನರಬಟ್ಟು ಬೈರಂಪಳ್ಳಿ ಹರಿಖಂಡಿಗೆ ಬೈರಂಪಳ್ಳಿ ಗ್ರಾಮ ಹಾಗೂ 2) ದಿಲಿಪ್ ಶೆಟ್ಟ (28) ತಂದೆ: ಶಿವರಾಮ್ ಶೆಟ್ಟಿ ವಾಸ: ಸಂಜೀವಿನಿ ನಿವಾಸ ಸಿರಿಬೈಲು ಕೆಳಮನೆ ಕಡ್ತಲ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now