
ಅಬುಬಕ್ಕರ್ ಪ್ರಾಯ: 48 ವರ್ಷ, ತಂದೆ: ದಿ. ಅಬ್ದುಲ್ಲ, ವಾಸ: ಯಾಸ್ಮೀನ್ ಮಂಜೀಲ್, ತೋಟದ ಮನೆ, ಕುದ್ರು ರಸ್ತೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇತನು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಗೂ MOB ಆಸಾಮಿಯಾಗಿದ್ದು, ಈತನ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ. ಸದ್ರಿ ವ್ಯಕ್ತಿಯ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 74/2024 ಕಲಂ: 303(2) R/w 3(5) BNS, ಮತ್ತು ಕಲಂ 5,12 The Karnataka Prevention Of Slaughter and Prevention Of Cattle Ordinance Act – 2020, U/s 11(1)(D) Prevention of cruelty to animals Act-1960 ಪ್ರಕರಣದಲ್ಲಿ ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿದ ಬಗ್ಗೆ ಜಾಮೀನು ರದ್ದತಿಯ ಕುರಿತು ಮಾನ್ಯ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದು, ಅದರಂತೆ ಮಾನ್ಯ ನ್ಯಾಯಾಲಯವು ಸದ್ರಿ ರೌಡಿ ಆಸಾಮಿಗೆ ನೀಡಿದ ಜಾಮೀನು ರದ್ದುಗೊಳಿಸಿ, ಈ ದಿನ ರಿಮಾಂಡ್ ವಾರೆಂಟ್ ಹೊರಡಿಸಿರುತ್ತದೆ. ಆತನನ್ನು ಈ ದಿನವೇ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು 07.04.2026 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶವನ್ನು ಹೊರಡಿಸಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now