ಜೋಗುಳದ ಹಾಡಲ್ಲಿ ಮಾತೃ ಭಾಷೆ ಅಡಕ- ಚಿಂತಕ ಪ್ರೊ. ವಿಲಿಯಂ ದ’ ಸಿಲ್ವ

ಜೋಗುಳದ ಹಾಡಲ್ಲಿ ಮಾತೃ ಭಾಷೆ ಅಡಕ- ಚಿಂತಕ ಪ್ರೊ. ವಿಲಿಯಂ ದ’ ಸಿಲ್ವ

0Shares

ಉಡುಪಿ: ಮಗು ತಾಯಿಯ ಹಾಲು ಹೀರುವಾಗಿನ ತುಟಿಯ ಚಲನೆಯಿಂದಲೇ ಮಾತು ಶುರುವಾಗುತ್ತದೆ. ಮಗು ಜೋಗುಳದ ಹಾಡುಗಳನ್ನು ಯಾವ ಭಾಷೆಯಲ್ಲಿ ಕೇಳಿಸಿಕೊಳ್ಳುತ್ತದೊ ಅದೇ ಮಾತೃಭಾಷೆ. ಅದನ್ನು ಪಿತೃಭಾಷೆ ಅಥವಾ ಸೋದರಿ ಭಾಷೆ ಎಂದು ಕರೆಯಬಹುದು.

ಈ ಭಾಷೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತದೆ ಎಂದು ಸಾಮಾಜಿಕ ಚಿಂತಕ ಪ್ರೊ.ವಿಲಿಯಂ ದ’ ಸಿಲ್ವ ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಹುಮಾನಿಟಿ ಆಂಡ್ ಆರ್ಟ್ಸ್, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಮಾಹೆ ವಿದ್ಯಾರ್ಥಿಗಳ ಬಹುಭಾಷಾ ಕವಿತಾ ಕಲಾಪದಲ್ಲಿ ಜಪಾನಿ, ಭೋಜ್‌ಪುರಿ, ಮರಾಠಿ ಸೇರಿದಂತೆ ಕರಾವಳಿಯ ಪ್ರಾದೇಶಿಕ ಭಾಷೆಗಳಾದ ತುಳು, ಕೊರಗ, ಕೊಂಕಣಿ ಮತ್ತು ಕುಂದಗನ್ನಡ ಭಾಷೆಗಳಲ್ಲಿ ಕವನ ವಾಚನ ನಡೆಯಿತು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮಾಹೆ ಸಂಸ್ಥೆಯ ಸಂಯೋಜಕ ಡಾ.ಪೃಥ್ವಿರಾಜೇಶ್ ಕುಮಾರ್ ಕೆಪಿ ರಾವ್ ಕಸಾಪದ ರಾಘವೇಂದ್ರ ಪ್ರಭು ಕರ್ವಾಲ್, ಸತೀಶ್ ಕೊಡವೂರು, ಟಿ.ಸದಾಶಿವ ರಾವ್, ಪದ್ಮಾಸಿನಿ ಉಪಸ್ಥಿತರಿದ್ದರು. ಸೌಮ್ಯಾ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now