
ದಿನಾಂಕ:17/02/2026 ರಂದು ರಾತ್ರಿ ಸಮಯ ಸುಮಾರು 10:30 ಗಂಟೆಗೆ ರಾಘವೇಂದ್ರ ಮತ್ತು ಸುಧೀಂದ್ರ ರವರು ಪೆರ್ಡೂರು ಗ್ರಾಮದ ಪೆರ್ಡೂರು ದೇವಸ್ಥಾನದ ಎದುರು ಗದ್ದೆಯ ಜಾಗದಲ್ಲಿದ್ದ ಕರುವನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿ KA 20 AA 9306ನೇ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸುತ್ತಾರೆ. ಈ ಬಗ್ಗೆ ಹಿರಿಯಡಕ ಠಾಣಾ ಅಪರಾದ ಕ್ರಮಾಂಕ : 14/2026 ಕಲಂ: 303(2),62 BNS ಮತ್ತು ಕಲಂ:5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ.ಕೆ.ಯು ಇವರ ನಿರ್ದೆಶನದಂತೆ ಬ್ರಹ್ಮಾವರ ಪೋಲಿಸ್ ವೃತ್ತ ನಿರೀಕ್ಷಕರಾದ ಗೋಪೀಕೃಷ್ಣ ರವರ ಮಾರ್ಗದರ್ಶನದಲ್ಲಿ ಪುನೀತ್ ಕುಮಾರ್ ಬಿ.ಇ ಪಿ.ಎಸ್.ಐ (ಕಾ&ಸು) ಮತ್ತು ವಿಠ್ಠಲ ಮಲವಡಕರ-ಪಿಎಸ್ ಐ(ತನಿಖೆ) ಹಿರಿಯಡಕ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಶೈಲೇಶ್ ಕುಮಾರ-ಎಎಸ್ ಐ ಮತ್ತು ರಮೇಶ ರವರು ಆರೋಪಿತುಗಳಾದ 1) ರಾಘವೇಂದ್ರ ಪ್ರಾಯ 36 ವರ್ಷ ತಂದೆ:ಸೀನ ಮರಕಾಲ ವಾಸ: ಮಾತೃಶ್ರೀ ನಿಲಯ ಪಾಡಿಗಾರ ಪೆರ್ಡೂರು ಗ್ರಾಮ ಉಡುಪಿ ತಾಲೂಕು 2) ಸುಧೀಂದ್ರ ಶೆಟ್ಟಿ @ ಬಾಬು ಪ್ರಾಯ 36 ವರ್ಷ ತಂದೆ:ಶೇಖರ ಶೆಟ್ಟಿ ವಾಸ: ನೀಲಶ್ರೀ ಕುಂಜದಕಟ್ಟೆ ಕಾರಡೆ ಪೆರ್ಡೂರು ಗ್ರಾಮ ಉಡುಪಿ ತಾಲೂಕು ರವರನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ KA 20 AA 9306 ನೇ ಆಟೋ ರಿಕ್ಷಾ ಸಮೇತ ವಶಕ್ಕೆ ಪಡೆದಿರುತ್ತಾರೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now