

ಉಡುಪಿ, 05 ಅಕ್ಟೋಬರ್ 2024: ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಶಾಲೆಯು ಅಕ್ಟೋಬರ್ 2, 2024 ರಂದು ಗಾಂಧೀ ಜಯಂತಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಆಯೋಜಿಸಿ ಹರ್ಷೋದ್ಗಾರದಿಂದ ಆಚರಿಸಿದರು.






ಶಾಲೆಯ ಪ್ರಾಂಶುಪಾಲರು ರೆ|| ಫಾ|| ಡೊಮಿನಿಕ್ ಸುನಿಲ್ ಲೋಬೋ, ಉಪಪ್ರಾಂಶುಪಾಲರು, ರೆ|| ಫಾ|| ರವಿ ರಾಜೇಶ್ ಸೆರಾವೋ, ಸಂಯೋಜಕಿ ಮಿಸ್ ಮ್ಯಾಗ್ದಲೀನಾ ಲೂವಿಸ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರೊಂದಿಗೆ ಸಮಾರಂಭವನ್ನು ಪ್ರಾರಂಭಿಸಿದರು. ಇದನ್ನು ಅನುಸರಿಸಿ ದೀಪವನ್ನು ಬೆಳಗಳಾಯಿತು, ಇದು ಈ ಮಹಾನ್ ನಾಯಕರಿಗೆ ಗೌರವವನ್ನು ಸಂಕೇತಿಸುತ್ತದೆ.


ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರ್ವಧರ್ಮ ಪ್ರಾರ್ಥನೆಯ ಮೂಲಕ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ರೆ|| ಫಾ|| ಡೊಮಿನಿಕ್ ಸುನಿಲ್ ಲೋಬೋ ಅವರು ಗಾಂಧೀಜಿಯವರ ತತ್ವಗಳ ಬಗ್ಗೆ ಮಾತನಾಡಿದರು.

5ನೇ ತರಗತಿಯ ವಿದ್ಯಾರ್ಥಿನಿ ಸಾಂಚಿ ಗಾಂಧೀ ಜಯಂತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದಳು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿ ತಮ್ಮ ಸುತ್ತಮುತ್ತ ಪರಿಸರವನ್ನು ಸ್ವಚ್ಛಗೊಳಿಸಲು ಕೈ ಜೋಡಿಸಿದರು. ಈ ಕಾರ್ಯಕ್ರಮವು ಏಕತೆ, ಸತ್ಯ ಮತ್ತು ಪರಿಸರ ಪ್ರೀತಿಗೆ ಧ್ವನಿಯಾಯಿತು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now