ಶಿರ್ವ: ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಗೆ ಭೇಟಿ*

ಶಿರ್ವ: ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಗೆ ಭೇಟಿ*

0Shares

ದಿನಾಂಕ 22/12/2025 ರಂದು ಬೆಳಿಗ್ಗೆ 10:00 ಗಂಟೆಗೆ ಸೂರ್ಯ ಚೈತನ್ಯ ಶಾಲೆ ಕುತ್ಯಾರು. ಇದರ ವಿದ್ಯಾರ್ಥಿಗಳು ಶಿರ್ವ ಠಾಣೆಗೆ ಆಗಮಿಸಿದ್ದು ಅಪರಾಧ ತಡೆ ಮಾಸದ ಬಗ್ಗೆ ಮಾನ್ಯ ಪಿಎಸ್ಐ ಮಂಜುನಾಥ ಮರಬದರವರು ತಿಳಿ ಹೇಳಿದರು. ಪೊಲೀಸ್ ಠಾಣೆ ಯ ಬಗ್ಗೆ, ಠಾಣೆಯಲ್ಲಿ ನೆಡೆಯುವ ದೈನಂದಿನ ಕಾರ್ಯಾಚಟುವಟಿಕೆ ಬಗ್ಗೆ ಹಾಗೂ ಆಯುಧ ಬಗ್ಗೆ ವಾಕಿ ಟಾಕಿ ಬಗ್ಗೆ. ದಾಖಲಾತಿ ಬಗ್ಗೆ ವಿವರಿಸಿದ್ದು. ಮಾದಕ ಧೃವ್ಯ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದ್ದು ಸುಮಾರು 75 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಪ್ರಶಾಂತ್ ಆಚಾರ್ಯ ಪ್ರತಿಮಾ ಹಾಗು ವಾಣಿ ಹಾಜರಿದ್ದರು ಠಾಣಾ ಅಧಿಕಾರಿ ಹಾಗೂ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅಡಿಗ, ಎ ಎಸ್ ಐ ಶ್ರೀಧರ್ ಕೆ ಹಾಗೂ ಸಿಬ್ಬಂದಿ ಯವರು ಹಾಜರಿದ್ದರು.
ಶಾಲಾ ವಿದ್ಯಾರ್ಥಿಗಳಾದ ರಮ್ಯ ಹಾಗೂ ತೇಜಸ್ ಕೆ ಇವರು ತಮಗೆ ಠಾಣೆಯಲ್ಲಿ ಆದ ಅತ್ಯುತ್ತಮ ಅನುಭವ ಹಾಗೂ ಪೊಲೀಸರ ಬಗ್ಗೆ ಮಾಹಿತಿ ಹಾಗೂ ಪೊಲೀಸರು ದಿನದ 24 ಗಂಟೆ ಜನರ ಸೇವೆಯನ್ನು ಮಾಡುತ್ತಾರೆ ಕಳ್ಳರನ್ನು ಹಿಡಿಯುತ್ತಾರೆ ಹಾಗೂ ಅವರ ಸೇವೆಯ ಅನುಭವ ಇವತ್ತು ನಮಗೆ ದೊರೆತಿದೆ ಎಂದು ತಿಳಿಸಿದರು

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now