
ಪುತ್ತೂರು: ಪುತ್ತೂರಿನ ಒಂದೊಂದೇ ಬೇಡಿಕೆಗಲು ಈಡೇರುತ್ತಲೇ ಇದೆ. ಹಳೆಯ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಹೊಸ ಕಟ್ಟಡದ ಅಗತ್ಯತೆ ಇದೆ ಎಂದು ಶಾಸಕರಾದ ಪ್ರಾರಂಭದಲ್ಲಿ ಅಶೋಕ್ ರೈ ತಾಪಂಗೆ ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ಹೇಳಿದ್ದರು.
ಕೊಟ್ಟ ಮಾತಿನಂತೆ ಶಾಸಕರು ನಡೆದುಕೊಂಡಿದ್ದಾರೆ. ನಾಳೆ ಸುಮಾರು 5 ಕೋಟಿ ರೂ ವೆಚ್ಚದ ನೂತನ ತಾಪಂ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದ್ದು, ದರ್ಬೆ ಪರ್ಲಡ್ಕ ರಸ್ತೆಯಲ್ಲಿರುವ ಕೃಷಿ ಇಲಾಖೆಯ ಕಚೇರಿ ಬಳಿ ನೂತನ ಕಟ್ಟಡ ನಿರ್ಮಾಣವಾಗಲಿದೆ.
ಈ ಹಿಂದೆ ಪುತ್ತೂರಿಗೆ ಹೊಸ ತಾಪಂ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿತ್ತು ಆದರೆ ಇಚ್ಚಾಶಕ್ತಿಯ ಕೊರತೆಯ ಕಾರಣಕ್ಕೆ ಅದು ಕಡಬಕ್ಕೆ ಸ್ಥಳಾಂತರವಾಗಿತ್ತು. ಅತ್ಯಂತ ಹಳೆಯ ಕಟ್ಟಡದಲ್ಲಿರುವ ಈಗಿನ ತಾಲೂಕು ಪಂಚಾಯತ್ ಕಟ್ಟಡ ನೋಟಕ್ಕೆ ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್‌ನಂತೆ ಗೋಚರಿಸುತ್ತಿತ್ತು. ತಾಲೂಕು ಕಚೇರಿಗೆ ಮಿನಿ ವಿಧಾನಸೌಧ ಬೃಹತ್ ಕಟ್ಟಡ ನಿರ್ಮಾಣವಾದ ಬಳಿಕ ತಾಪಂ ಕಚೇರಿಗೆ ಅನಾಥ ಭಾವ ಕಾಡುತ್ತಿತ್ತು.
ಕರ್ನಾಟಕ ಸರಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಖೆ, ದ ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮೂಲಕ ಈ ಕಟ್ಟಡ ನಿರ್ಮಾಣವಾಗಲಿದೆ. ಪಂಚಾಯತ್ ಇಲಾಖೆಯ ಮೂಲಕ ಸತತ ಒತ್ತಡವನ್ನು ತರುವ ಮೂಲಕ 5 ಕೋಟಿ ರೂ ಅನುದಾನ ಪಡೆಯುವಲ್ಲಿ ಶಾಸಕರು ಸಫಲರಾಗಿದ್ದರು. ಹೊಸ ಕಟ್ಟಡ ಆಧುನಿಕ ಶೈಲಿ ಹಾಗೂ ಸಕಲ ವ್ಯವಸ್ಥೆಗಳ ಕಟ್ಟಡವಾಗಲಿದೆ.
ನಾಳೆ ಬೆಳಿಗ್ಗೆ 11.30 ಕ್ಕೆ ಶಾಸಕರು ನೂತನ ಕಟ್ಟಡಕ್ಕೆ ಶಿಲಾನ್ಯಾಸನವನ್ನು ನೆರವೇರಿಸಲಿದ್ದು
ನಾಳೆ ಬೆಳಿಗ್ಗೆ 11.30 ಕ್ಕೆ ಶಾಸಕರು ನೂತನ ಕಟ್ಟಡಕ್ಕೆ ಶಿಲಾನ್ಯಾಸನವನ್ನು ನೆರವೇರಿಸಲಿದ್ದು ಕಾರ್ಯಕ್ರಮದಲ್ಲಿ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇಲಾಖೆ ಪ್ರಕಟನೆ ತಿಳಿಸಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now