ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನರ ದಿನಾಚರಣೆ

ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನರ ದಿನಾಚರಣೆ

0Shares

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಇವರ ಸಹಯೋಗದೊಂದಿಗೆ ಉಡುಪಿ ವಲಯ ಮಟ್ಟದ ವಿಶ್ವ ವಿಶೇಷ ಚೇತನದ ದಿನಾಚರಣೆಯನ್ನು ಸಮನ್ವಯ ಶಿಕ್ಷಣದ ಅಂಗವಾದ ಎಸ್ ಆರ್ ಪಿ ಕೇಂದ್ರದಲ್ಲಿ ನಡೆಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಯವರಾದ ಡಾ. ಎಲ್ಲಮ್ಮ ರವರು ವಿಶ್ವ ವಿಶೇಷ ಚೇ ತನರ ದಿನಾಚರಣೆಯ ಅಂಗವಾಗಿ ವಿಶೇಷ ಚೇತನರಲ್ಲಿ ಸ್ವಾವಲಂಬನೆ ಮತ್ತು ಯೋಗ ಕ್ಷೇಮ ಹೆಚ್ಚಿಸಿ ಅವರನ್ನು ಶೈಕ್ಷಣಿಕ, ಸಾಮಾಜಿಕ,ಆರ್ಥಿಕ,ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರದ ಮುಖ್ಯ ವಾಹಿನಿಗಳಲ್ಲಿ ತರುವುದು ಹಾಗೂ ಸಮಾಜದ ಇತರ ವ್ಯಕ್ತಿಗಳಂತೆ ಇವರಿಗೆ ಸಮಾನವಾದ ಅವಕಾಶಗಳನ್ನು ಹಾಗೂ ಅವರ ಸಾಧನೆಗಳನ್ನು ಜಾಗತಿಕವಾಗಿ ಆಚರಿಸಬೇಕೆಂಬುದರ ಬಗ್ಗೆ ಹಾಗೂ ಈ ದಿನಾಚರಣೆಯ ಉದ್ದೇಶ ಮಹತ್ವ ದ ಬಗ್ಗೆ ಉತ್ತಮ ಅರಿವು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಶ್ರೀ ರಾಜೇಶ್ ಕರ್ಕೆರ,ರೋಟರಿ ಕ್ಲಬ್ ಅಂಬಲಪಾಡಿ , ಗಂಗೆ ಶಾನ್ ಬಾಗ್, ಶ್ರೀ ನಾಗರಾಜ್, ಜಯಶೀಲ ಬಿ ರೋಟೆ ಹಾಗು ಬಿ ಐ ಇ ಆರ್ ಟಿ ಯವರಾದ ಆಶಾ, ಗೀತಾ ಎಸ್ ಹೆಗಡೆ ಹಾಗೂ ದೀಕ್ಷಿತ ಫಿಜಿಯೋಥೆರಪಿಸ್ಟ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ವಿಶೇಷ ಚೇತನರ ಕ್ರೀಡಾಕೂಟಕ್ಕೆ ಆಯ್ಕೆಯಾದ ನಾಲ್ಕು ವಿಶೇಷ ಚೇತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗು ವಿಶೇಷ ಚೇತನ ಮಕ್ಕಳು ಹಾಗೂ ಪೋಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಾಗೂ ಪೋಷಕರಿಗೆ ಬಹುಮಾನದ ವ್ಯವಸ್ಥೆ ಹಾಗೂ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲಾಯಿತು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು,One good step ತಂಡ ಹಾಗೂ ರೋಟರಿ ಕ್ಲಬ್ ಅಂಬಲಪಾಡಿ,ಹಾಗೂ ಗಂಗೆ ಶಾನ್ ಬಾಗ್, ಚಂದ್ರಿಕಾರವರ ಅಮೂಲ್ಯ ಬೆಂಬಲ ಹಾಗೂ ಸಹಕಾರ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೆರವೇರಲು ಸಹಕಾರಿಯಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now