
ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇದರ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ‘ಸಂವಿಧಾನ ದಿನಾಚರಣೆ’ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿಯು ವಿಭಾಗ ಬ್ರಹ್ಮಾವರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿಯು ವಿಭಾಗದ ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿರುವ ವಾಸು ಮೊಗವೀರ ವಹಿಸಿದ್ದರು. ಎಡ್ವಲ್ಡ್ ಲಾರೆನ್ಸ್ ಡಿಸೋಜಾರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಸ್.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೋಡಿಗಸ್ ಜೆ , ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಶ್ರೀಮತಿ ಮಮತಾ , ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಭರತ್ ರಾಜ್ ಎಸ್ ನೇಜಾರ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಇತಿಹಾಸ ಉಪನ್ಯಾಸಕರಾಗಿರುವ ಶ್ರೀಮತಿ ವಂದನಾ ಮೇಡಂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಎಡ್ವಲ್ಡ್ ಲಾರೆನ್ಸ್ ಡಿಸೋಜಾ ಅವರು “ಭಾರತದ ಸಂವಿಧಾನ ಕೇವಲ ಕಾನೂನು ಪುಸ್ತಕವಲ್ಲ. ಇದು ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಮಾಜವನ್ನು ಸಮಾನತೆಯ ದಾರಿಯಲ್ಲಿ ಮುನ್ನಡೆಸುವ ಕಾನೂನು ದಿಕ್ಸೂಚಿ “ಎಂದು ಉತ್ತಮ ಮಾಹಿತಿಯನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ರಾಬರ್ಟ್ ರೋಡಿಗಸ್ ಜೆ ಸಂವಿಧಾನ ದಿನಾಚರಣೆಯ ಮಹತ್ವವನ್ನು ತಿಳಿಸಿ ಕೊಡುವುದರ ಮೂಲಕ ಪ್ರಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಮಮತಾ ಸಂವಿಧಾನ ಪೀಠಿಕೆ ಭೋದಿಸಿ, ಸರ್ವರನ್ನು ಸ್ವಾಗತಿಸಿದರು. ವ್ಯಕ್ತಿ ಪರಿಚಯವನ್ನು ಕು.ಚಿನ್ಮಯಿ ಹಾಗೂ ಧನ್ಯವಾದವನ್ನು ಭರತ್ ರಾಜ್ ಎಸ್ ನೇಜಾರ್ ಸಮಪಿ೯ಸಿದರು. ಮತ್ತು ಕು.ಅಭಿಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now