ಅತ್ಯಂತ ಯಶಸ್ವಿಯಾಗಿ ನಡೆದ ಹೆಜ್ಜೆ-ಗೆಜ್ಜೆಯ ರಾಷ್ಟ್ರಮಟ್ಟದ ಭಕ್ತಿ ಗಾನ ಲಹರಿ ಸ್ಪರ್ಧೆ

ಅತ್ಯಂತ ಯಶಸ್ವಿಯಾಗಿ ನಡೆದ ಹೆಜ್ಜೆ-ಗೆಜ್ಜೆಯ ರಾಷ್ಟ್ರಮಟ್ಟದ ಭಕ್ತಿ ಗಾನ ಲಹರಿ ಸ್ಪರ್ಧೆ

0Shares

ಉಡುಪಿ ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ನಲ್ಲಿ ಭಕ್ತಿ ಗಾನ ಲಹರಿ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆ ಅತ್ಯುತ್ತಮವಾಗಿ ನಡೆಯಿತು. ಹೆಜ್ಜೆಗೆಜ್ಜೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣರ ಸಂಯೋಜನೆಯ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟಿಗೆ 19 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಹಿರಿಯ ಸಂಗೀತ ಗುರು, ಕರ್ನಾಟಕ ಕಲಾಶ್ರೀ ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ ರವರು ದೀಪ ಪ್ರಜ್ವಲನಮಾಡಿ ಉದ್ಘಾಟಿಸಿದರು , ಮತ್ತು ಎಲ್ಲಾ ಯುವ ಸ್ಪರ್ದಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆ ನಿರ್ದೇಶಕಿ ವಿದುಷಿ ಯಶಾರಾಮಕೃಷ್ಣರವರು ಸ್ಪರ್ಧೆಯ ಉದ್ದೇಶ ಮತ್ತು ವಿವರಗಳನ್ನು ತಿಳಿಸಿದರು.

ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪುತ್ತೂರಿನ ಅನುಶ್ರೀ ಮಳಿ ( ಗುರು:ವಿದುಷಿ ಕಾಂಚನ ಶ್ರುತಿರಂಜಿನಿ) ಫಲಕದೊಂದಿಗೆ ರೂ. 10,000 ನಗದು ಬಹುಮಾನ ಪಡೆದರು. ಎರಡನೇ ಬಹುಮಾನವನ್ನು ಬೆಂಗಳೂರಿನ ಎನ್. ಜೆ. ಎಂ ರಾಘವೇಂದ್ರ ಭಟ್ (ಗುರು: ವಿದ್ವಾನ್ ಕೆ. ವಿ ಕೃಷ್ಣ ಪ್ರಸಾದ್ , ಬೆಂಗಳೂರು) ಪಡೆದು ಫಲಕ ದೊಂದಿಗೆ ರೂ. 7,000 ತಮ್ಮದಾಗಿಸಿಕೊಂಡರು. ಮೂರನೇ ಬಹುಮಾನವನ್ನು ಮಣಿಪಾಲದ ಸ್ವಸ್ತಿ ಎಂ. ಭಟ್ (ಗುರು: ವಿದ್ವಾನ್ ಕೆ . ರಾಘವೇಂದ್ರ ಆಚಾರ್ಯ ಮಣಿಪಾಲ, ವಿದುಷಿ ಶ್ರೀಮತಿ ಉಮಾಶಂಕರಿ, ಪರ್ಕಳ) ಪಡೆದು ಫಲಕ ದೊಂದಿಗೆ ರೂ.5,000 ನಗದು ಪಡೆದರು. ಸಮಾಧಾನಕರ ಬಹುಮಾನವನ್ನು ಬೆಂಗಳೂರಿನ ಎಂ. ಜೆ ಶ್ರೀಕುಮಾರ್ ಭಟ್ (ಗುರು: ವಿದ್ವಾನ್ ಕೆ. ವಿ ಕೃಷ್ಣಪ್ರಸಾದ್) ಹಾಗೂ ಉಡುಪಿಯ ಪರ್ಜನ್ಯ ಕೆ. ರಾವ್ (ಗುರು: ವಿದುಷಿ ಚೇತನಾ ಆಚಾರ್ಯ , ಉಡುಪಿ) ಪಡೆದರು ಪ್ರಥಮ ಬಹುಮಾನ ಪಡೆದ ಅನುಶ್ರೀ ಮಳಿ ಯವರಿಗೆ ದಾಸಗಾನರತ್ನ ಪ್ರಶಸ್ತಿ ನೀಡಲಾಯಿತು.

13 ರಿಂದ 25 ವರ್ಷ ವಯೋಮಿತಿಯ ಉದಯೋನ್ಮುಖ ಸಂಗೀತ ಕಲಾವಿದರು

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರತಿಯೋರ್ವರಿಗೂ ಸ್ಮರಣಿಕೆಯೊಂದಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಯಿತು.

ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬೊಟ್ಯಾಡಿ ಶ್ರೀ ಲೋಕಯ್ಯ , ಉಡುಪಿ ಅವರು ( ಹಿರಿಯ ಸಮಾಜ ಸೇವಕರು ಮತ್ತು ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್) ಮಾತನಾಡಿ ಯುವಕರು ಸಂಗೀತ ನೃತ್ಯದ ಕಡೆಗೆ ಒಲವು ತೋರಿಸಿದರೆ ಸ್ವಸ್ಥ ಸಮಾಜ ರೂಪುಗೊಳ್ಳುವುದು ಖಚಿತ ಅಂದರಲ್ಲದೆ ಹೆಜ್ಜೆಗೆಜ್ಜೆ ಯ ಕೊಡುಗೆಯನ್ನು ಹೊಗಳಿದರು. ಈ ಸ್ಪರ್ಧೆಗೆ ವಿದ್ವಾನ್ ಮಧೂರು ಪಿ ಬಾಲಸುಬ್ರಮಣ್ಯಂ, ಹಾಗೂ ವಿದುಷಿ ವಿನುತಾ ಆಚಾರ್ಯ ನಿರ್ಣಾಯಕರಾಗಿದ್ದರು. ಸಂಸ್ಥೆಯ ನಿರ್ವಾಹಕ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ, ವಿದುಷಿ ಶ್ರಾವ್ಯ , ವಿದುಷಿ ರಂಜನಿ, ವಿದುಷಿ ರಕ್ಷಾ, ವಿದುಷಿ ಕಾವ್ಯ ಮತ್ತು ಕುಮಾರಿ ಸೌಭಾಗ್ಯ ಸಹಕರಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now