
ಮಂಜೇಶ್ವರ, ಡಿಸೆಂಬರ್ 4, 2025: ಬೀದಿಯಲ್ಲಿ ಅಲೆದಾಡುತ್ತಾ ಸಾಮಾಜಿಕ ಹಿಂಜರಿತದ ಲಕ್ಷಣಗಳನ್ನು ತೋರಿಸುತ್ತಿದ್ದ ಶ್ರೀ ಬಂಟಿ ಎಂಬ ವ್ಯಕ್ತಿಯನ್ನು ಸ್ನೇಹಾಲಯದ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಣ್ಣೂರು ಮೂಲದ ಕೃಪಾ ಚಾರಿಟೇಬಲ್ ಟ್ರಸ್ಟ್ನ ಸಿಬ್ಬಂದಿಗಳು ಅವರ ಮಾನಸಿಕ ಸ್ಥಿತಿಯನ್ನು ಗುರುತಿಸಿ, ತಕ್ಷಣ ಸ್ನೇಹಾಲಯಕ್ಕೆ ಸುರಕ್ಷಿತವಾಗಿ ದಾಖಲಿಸಿದರು.
ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಬ್ರ. ಜೋಸೆಫ್ ಕ್ರಾಸ್ತಾರವರಿಗೆ ಲಭ್ಯವಾದ ಮಾಹಿತಿಯ ಪ್ರಕಾರ, ಶ್ರೀ ಬಂಟಿಯವರಲ್ಲಿ ಅಲೆದಾಡುವ ನಡವಳಿಕೆ ಮತ್ತು ಭಾವನಾತ್ಮಕ ದೂರಾವಸ್ಥೆಯಂತಹ ಲಕ್ಷಣಗಳು ಕಾಣುತಿತ್ತು ಸಮಯೋಚಿತ ಚಿಕಿತ್ಸೆ ಅಗತ್ಯವೆಂದು ಮನಗಂಡ ಅವರನ್ನು ಪುನರ್ವಸತಿ ಚಿಕಿತ್ಸೆಗೆ ಸೇರಿಸಿದೆ. ಪ್ರಸ್ತುತ ಬಂಟಿಗೆ ಸ್ನೇಹಾಲಯದಲ್ಲಿ ಸಮಗ್ರ ಚಿಕಿತ್ಸೆ ವೈದ್ಯಕೀಯ ಪರಿಶೀಲನೆ, ಮಾನಸಿಕ ಬೆಂಬಲ ಮತ್ತು ಸಾಮಾಜಿಕ ಪುನರ್ವಸತಿ ಸೇವೆಗಳು ದೊರೆಯುತ್ತಿವೆ. ಜೊತೆಗೆ, ಅವರ ಕುಟುಂಬವನ್ನು ಪತ್ತೆಹಚ್ಚಿ ಸುರಕ್ಷಿತ ಪುನರ್ಮಿಲನ ಮಾಡುವ ಕೆಲಸವೂ ನಡೆಯುತ್ತಿದೆ.
ಯಾರಿಗಾದರೂ ಬಂಟಿ ಕುರಿತು ಮಾಹಿತಿ ಇದ್ದರೆ, ದಯವಿಟ್ಟು ಸಂಪರ್ಕಿಸಿ:
📞 9446547033 / 8590339570 / 6282495137
ಸ್ನೇಹಾಲಯವು ಮಾನವೀಯ ಸೇವೆಯ ತನ್ನ ಧ್ಯೇಯಕ್ಕೆ ನಿಷ್ಠೆಯಿಂದ ಬದ್ಧವಾಗಿದೆ – ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಮತ್ತು ತ್ಯಜಿಸಲ್ಪಟ್ಟವರನ್ನು ರಕ್ಷಿಸಿ, ಅವರಿಗೆ ಗೌರವ ಮತ್ತು ಭರವಸೆಯೊಂದಿಗೆ ಹೊಸ ಜೀವನ ಕಟ್ಟಿಕೊಡುವುದೇ ಇವರ ಉದ್ದೇಶವಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now