
ಮುಂಬಯಿ (ಆರ್‍ಬಿಐ), ನ.16: ದೈನಿಕ್ ಜಾಗರಣ್ ಪತ್ರಿಕೆ ಸಮೂಹವು ಕಳೆದ ನ.13 ರಿಂದ 16 ತನಕ ಮುಂಬಯಿಯಲ್ಲಿ ನಡೆಸಿದ ಪ್ರತಿಷ್ಠಿತ ಜಾಗ್ರಣ ಫಿಲ್ಮ್ ಫೆಸ್ಟಿವಲ್‍ನಲ್ಲಿ ಕನ್ನಡ ವಿಭಾಗದಲ್ಲಿ ಕೌಮುದಿ’ ಚಲನಚಿತ್ರ ಆಯ್ಕೆ ಆಗಿ ಪ್ರದರ್ಶಿಸಲ್ಪಟ್ಟಿತ್ತು. ಕನ್ನಡತಿ ಯಶೋದ ಪ್ರಕಾಶ್ ಕೊಟ್ಟುಕತ್ತಿರ ರಚಿಸಿ ನಿರ್ದೇಶಿತಕೌಮುದಿ’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರತಿಭಾವಂತ ನಟಿ ಅಕ್ಷತಾ ಪಾಂಡವಪುರ ಅಭಿನಯಿಸಿದ ಚಿತ್ತವ್ವನ ಪಾತ್ರಕ್ಕೆ ವಿಶೇಷವಾಗಿ ತೀರ್ಪುಗಾರರು ಮೆಚ್ಚಿ `ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಿರುವರು.
ಕಳೆದ ಶನಿವಾರ ಉಪನಗರದ ಅಂಧೇರಿ ಪಶ್ಚಿಮದಲ್ಲಿನ ಫನ್ ರಿಪಬ್ಲಿಕ್ ಮಾಲ್‍ನ ಚಿತ್ರಮಂದಿರದಲ್ಲಿ ಪ್ರದರ್ಶಿಸಲ್ಪಟ್ಟಿದ್ದು, ಭಾನುವಾರ ನಗರದ ಸ್ಟಾರ್ ಹೊಟೇಲ್‍ನಲ್ಲಿ ನಡೆಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭ್ಯಾಗತರಾಗಿದ್ದ ಪ್ರಸಿದ್ಧ ನಟ ಯಶಪಾಲ ಶರ್ಮಾ ಉಪಸ್ಥಿತರಿದ್ದು ಅಕ್ಷತಾ ಪಾಂಡವಪುರ ಅವರಿಗೆ ಪ್ರಶಸ್ತಿಫಲಕ ನೀಡಿ ಗೌರವಿಸಿ ಅಭಿನಂದಿಸಿದರು.
ಸತ್ಯ ಘಟನೆಗಳನ್ನು ಆಧರಿಸಿದ ಆದರೆ ದುರದೃಷ್ಟವಶಾತ್ ಹಾನಿಕಾರಕ ಅಭ್ಯಾಸಗಳು ಇನ್ನೂ ಅಸ್ತಿತ್ವದಲ್ಲಿವೆ ಅನ್ನುವುದನ್ನು ಭಿತ್ತರಿಸಲ್ಪಡುವ ಯಶೋದ ಪ್ರಕಾಶ್ ಕೊಟ್ಟುಕತ್ತಿರ ರಚಿಸಿ ನಿರ್ದೇಶಿತ ಕುರುಡು ನಂಬಿಕೆಯ “ಕೌಮುದಿ” ಚಿತ್ರವು ಮುಂಬಯಿಯಲ್ಲಿ ನಡೆಯುತ್ತಿರುವ ಜಾಗರಣ್ ಫಿಲ್ಮ್ ಪೆಸ್ಟಿವಲ್ ಸ್ಪರ್ಧೆಗೆ ಆಯ್ಕೆಯಾಗಿತ್ತು. ಇಂದಿಗೂ ಚಲಾವಣೆಯಲ್ಲಿರುವ ಮೊದಲ ಬಾರಿ ಮುಟ್ಟಾದ ಹೆಣ್ಮಕ್ಕಳನ್ನು ಮತ್ತು ಬಾಣಂತಿ-ಮಗುವನ್ನು ಮೈಲಿಗೆಯ ನೆಪದಲ್ಲಿ ಊರ ಹೊರಗಿಡುವ ಮೌಢ್ಯಾಚರಣೆಯ ಕಥಾವಸ್ತುವುಳ್ಳ `ಕೌಮುದಿ’ಯನ್ನು ಯಶೋದ ಪ್ರಕಾಶ್ ಕೊಟ್ಟುಕತಿರಾ ಅವರು ಅತ್ಯಂತ ಶೃದ್ಧೆಯಿಂದ ನಿರ್ದೇಶಿಸಿರುವರು. ಚಿತ್ರ ತಂಡದ ಎಲ್ಲರೂ ಪಾತ್ರಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಅಭಿನಯಿಸಿ ಚಿತ್ರದ ಯಶಸ್ಸಿಗೆ ಪಾತ್ರರಾಗಿದ್ದಾರೆ. ಕಂದೀಲು ನಿರ್ದೇಶನದ ಹಾಗೂ ಪ್ರಕಾಶ್ ಕಾರ್ಯಪ್ಪ ಕೊಟ್ಟುಕತ್ತಿರ ನಿರ್ಮಾಪಕತ್ವದೊಂದಿಗೆ ರಚಿಸಲ್ಪಟ್ಟ ಈ ಚಲನಚಿತ್ರವು ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಪ್ರಸ್ತುತಿಯೊಂದಿಗೆ ತೆರೆಕಂಡಿದೆ.
ಚಿತ್ರೋತ್ಸವದಲ್ಲಿ ಮುಂಬಯಿ ಕಲಾ ಕೇಂದ್ರ ಇದರ ಅಧ್ಯಕ್ಷ ಟಿ.ಆರ್ ಮಧುಸೂದನ್, ಪತ್ರಕರ್ತ ಗೋಪಾಲ ತ್ರಾಸಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದು ಭಾರತೀಯ ಭಾಷೆಗಳ ಜೊತೆ ಅಂತರಾಷ್ಟ್ರೀಯ ಚಲನಚಿತ್ರಗಳೂ ಪ್ರದರ್ಶಿಸಲ್ಪಟ್ಟವು. ಹಿಂದಿ ನಟ ವಿನೀತ್ ಕುಮಾರ್ ಸಿಂಘ್ ವಿಶೇಷ ನಟ ಪ್ರಶಸ್ತಿಗೆ ಭಾಜನರಾದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now