
ಮುಂಬಯಿ, ಡಿ.23: ಯಲ್ಲಿ ಕಳೆದ 71 ವರ್ಷಗಳಿಂದ ನಾಟಕೋತ್ಸವ, ಯಕ್ಷಗಾನ,ನೃತ್ಯ,ಸಂಗೀತ, ಸಾಹಿತ್ಯ ಮುಂತಾದ ಸೃಜನಶೀಲ ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ 66ನೇ ನಾಟಕೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಮೂರುದಿನ ಮೂರು ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ಆಯೋಜಿಸಿರುವ ಕನ್ನಡ ಕಲಾ ಕೇಂದ್ರ ಮುಂಬಯಿ ಸಂಸ್ಥೆಯು, ತುಳು ಕನ್ನಡ ವೆಲ್ಫೆರ್ ಅಸೋಸಿಯೇಶನ್ (ರಿ.) ವಿೂರಾ ಭಯಂದರ್ ಹಾಗೂ ಕಲಾ ಭೂಮಿಕಾ ವಿೂರಾ ಭಯಂದರ್ ಸಂಸ್ಥೆಗಳ ಸಹಯೋಗದೊಂದಿ ಗೆ ಮೊದಲ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ರಂಗನಟಿ, ನಾಟಕ ಸಿನೇಮಾ ನಿರ್ದೇಶಕಿ ನಿರ್ಮಲಾ ನಾದನ್ ಆಗಮಿಸಲಿದ್ದಾರೆ.

ಇದೇ ಬರುವ ಶನಿವಾರ (ಡಿ.27) ಮಧ್ಯಾಹ್ನ 2:30 ಗಂಟೆಯಿಂದ ಹೋಟೆಲ್ ಸುರಭಿ, ಮೊದಲ ಮಹಡಿ, ಮಾರ್ಕೆಟ್ ರೋಡ್, ರೈಲ್ವೆ ಸ್ಟೇಷನ್ ಹತ್ತಿರ, ವಿೂರಾರೋಡ್ ಪೂರ್ವ ಇಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ನಾಟಕ, ಪ್ರಹಸನ, ಹಾಡು, ಇನ್ನಿತರ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾದ ಮುಂಬಯಿಯಲ್ಲಿನ ಕನ್ನಡ ತುಳುಕಲಾವಿದ ಬಾಂಧವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಆತ್ಮ ವಿಶ್ವಾಸ, ಶಿಸ್ತು, ಸಮಯ ಪ್ರಜ್ಞೆ ಮತ್ತು ಒಟ್ಟು ವ್ಯಕ್ತಿತ್ವ ಬೆಳವಣಿಗೆಗೆ ರಂಗಭೂಮಿ ಕುರಿತಾದ ಕಲಿಕೆಗೆ ಈ ಶಿಬಿರ ಪ್ರಮುಖಪಾತ್ರ ವಹಿಸಲಿದೆ.

ಕಲಾ ಕೇಂದ್ರ ರಂಗಭೂಮಿ ಕುರಿತು ಆರಂಭಿಕ ತರಬೇತಿ ನೀಡುವ ಸದುದ್ಧೇಶದಿಂದ ಆಯಾ ಸಂಸ್ಥೆಗಳ ಸ್ಥಳ, ವಠಾರದಲ್ಲಿ ಈ ಕಮ್ಮಟವನ್ನು ಆಯೋಜನೆಯ ಉದ್ದೇಶ ಹೊಂದಿದೆ. ಮುಂದೆ ಸಮಯ, ಸಂದರ್ಭ, ಅವಕಾಶಲಭ್ಯವಾದಾಗ ಪೂರ್ಣ ಪ್ರಮಾಣದ ನಾಟಕ ಪ್ರದರ್ಶನಕ್ಕೆ ಅಣಿಯಾಗಲು ಇದು ಆರಂಭದ ಹೆಜ್ಜೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಅಂದು ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂನಿಂದ ನಿರ್ಮಲಾ ಎನ್. ರಂಗ ಕಲಾವಿದೆ, ನಾಟಕ, ಸಿನೇಮಾ ನಿರ್ದೇಶಕಿ, ಲೇಖಕಿ, ಸಂಘಟಕಿ ಆಗಮಿಸಿ ಶಿಬಿರವನ್ನು ನಿರ್ವಹಿಸಲಿದ್ದಾರೆ. ತುಳು ಕನ್ನಡ ವೆಲ್ಫೆರ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ಹಾಗೂ ಟ್ರಸ್ಟಿ ಎ.ಕೆ ಹರೀಶ್, ತುಳು ಕನ್ನಡ ವೆಲ್ಫೆರ್ ಅಸೋಸಿಯೇಶನ್‍ನ ಅಧ್ಯಕ್ಷ ಹರೀಶ್ ಸುವರ್ಣ ಕಣಂಜಾರು, ಮಹಿಳಾಧ್ಯಕ್ಷೆ ಆಶಾಲತಾ ಪಿ.ಶೆಟ್ಟಿ, ಕಲಾ ಭೂಮಿಕಾ ತಂಡದಸಂಸ್ಥಾಪಕ ಜಿ. ಕೆ.ಕೆಂಚನಕೆರೆ, ಕರುನಾಡ ಸಿರಿ ಅಧ್ಯಕ್ಷ ಬಾಲಚಂದ್ರ ದೇವಾಡಿಗ ಮತ್ತು ಕವಿ ಅಶೋಕ ವಳದೂರು ಉಪಸ್ಥಿತರಿದ್ದು ರಂಗಕರ್ಮಿ, ಸಾಹಿತಿ ಗೋಪಾಲ ತ್ರಾಸಿ ಮೇಲ್ವಿಚಾರಕರಾಗಿ ಸಹಕರಿಸಲಿದ್ದಾರೆ.
ಆಸಕ್ತ ಹಿರಿಕಿರಿಯ ರಂಗ ಕಲಾವಿದರು, ಕಲಾ ಪೆÇ್ರತ್ಸಾಹಕರು ಹಾಜರಿದ್ದು ಸಹಕರಿಸಬೇಕೆಂದು ಮೂರೂ ಸಂಸ್ಥೆಗಳ ಪರವಾಗಿ ಕನ್ನಡ ಕಲಾ ಕೇಂz (ರಿ.) ಅಧ್ಯಕ್ಷ ಮಧುಸೂಧನ ಟಿ.ಆರ್. ಮತ್ತು ಕಾರ್ಯದರ್ಶಿ ರಮೇಶ ಭಿರ್ತಿ ಈ ಮೂಲಕ ವಿನಂತಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now