
ಹಾವಂಜೆ: ಕೊಳಲಗಿರಿ ಬ್ಯಾಡ್ಮಿಂಟನ್ ಕ್ಲಬ್‌ನ ಹೊಸ ಕ್ರೀಡಾಂಗಣ ಉದ್ಘಾಟನ ಕಾರ್ಯಕ್ರಮವು 28.12.2024ರಂದು ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಿರಿಯಡ್ಕ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಶಾಂತ್ ಶೆಟ್ಟಿ ಕೊಳಲಗಿರಿ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು. ಗಿರಿ ಬ್ಯಾಡ್ಮಿಂಟನ್ ಕ್ಲಬ್ನ ನೂತನ ಲೋಗೋ ಮತ್ತು ಸಮವಸ್ತ್ರವನ್ನು ಯುವ ಉದ್ಯಮಿ ವಿಕ್ರಾಂತ್ ಶೆಟ್ಟಿ ಕೀಳಂಜೆ ಅವರು ಬಿಡುಗಡೆಗೊಳಿಸಿದರು.

ಬಳಿಕ ಪಂದ್ಯಕೂಟಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಾಂಕಿ ಡಿಸೋಜ ಚಾಲನೆ ನೀಡಿದರು. ಸಮಾರಂಭದಲ್ಲಿ ಉಡುಪಿ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಗೌರವ ಅಧ್ಯಕ್ಷರಾದ ಕಿಶೋರ್ ಆಚಾರ್ಯ, ಹಂಸಿನಿ ಸ್ಪೋರ್ಟ್ಸ ಶ್ರೀಶ ಆಚಾರ್ಯ, ಹಿಂದೂ ಗುರು ಸೇವಾ ಪರಿಷತ್ ನ ಅಧ್ಯಕ್ಷ ಸುಧಾಕರ ಆಚಾರ್ಯ, ಹಾವಂಜೆ ಗ್ರಾಮ ಪಂಚಾಯತಿ ಸಿಬ್ಬಂದಿ ಸದಾಶಿವ ಮುಂತಾದವರು ಉಪಸ್ಥಿತರಿದ್ದರು. ಜಯಗಳಿಸಿದ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಿರಿ ಬ್ಯಾಡ್ಮಿಂಟನ್ ಕ್ಲಬ್‌ನ ಎಲ್ಲಾ ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ಡಾ. ಸಂದೇಶ್ ಶೆಟ್ಟಿ ಅವರು ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























